ದಾವಣಗೆರೆ : ಸನಾತನ ಧರ್ಮದ ಚರ್ಚೆಯೇ ಒಂದು ತರ ಕ್ಯಾನ್ಸರ್ ಇದ್ದ ಹಾಗೆ. ಒಬ್ಬೊಬ್ಬರು ಒಂದು ಒಂದು ತರ ಹೇಳ್ತಾರೆ ಎಂದು ಉಪ ಸಭಾಪತಿ ರುದ್ರಪ್ಪ ಲಂಬಾಣಿ ಉರಿಯುವ ಬೆಂಕಿಗೆ ತುಪ್ಪ ಸುರಿದರು.
ದಾವಣಗೆರೆಯಲ್ಲಿ ಮಾತನಾಡಿರುವ ಅವರು, ನಮ್ಮ ನಮ್ಮ ಧರ್ಮ ಶ್ರೇಷ್ಠ ಅಂತ ಎಲ್ಲರಿಗೂ ಗೊತ್ತು. ಯಾರ್ಯಾರು ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ ಅದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಸನಾತನ ಧರ್ಮದ ಮೇಲೆ ನಾವು ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ. ಆ ನಂಬಿಕೆಯಂತೆ, ಅದೆ ರೀತಿ ಮುಂದುವರಿಯುತ್ತದೆ. ಯಾರಿಗೆ ಯಾವ ಧರ್ಮ ಸೇರಿಕೊಳ್ಳಬೇಕು ಎಂಬ ಸ್ವಾತಂತ್ರ್ಯ ಇದೆ, ಅವರವರಿಗೆ ಬೇಕಾದ ಧರ್ಮವನ್ನು ಲೈಕ್ ಮಾಡಬಹುದು. ಅವರವರ ವೈಯಕ್ತಿಕ ವಿಚಾರ ಅವರಿಗೆ ತಿಳಿದ ರೀತಿ ಅವರು ಮಾತನಾಡುತ್ತಾರೆ ಎಂದು ತಿಳಿಸಿದರು.
ಭಾರತ ನಮ್ಮ ದೇಶ, ಪ್ರಶ್ನೆ ಮಾಡಲ್ಲ
ಇಂಡಿಯಾ ಬದಲಾಗಿ ಭಾರತ ಹೆಸರು ಮರುನಾಮಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇರೆ ಬೇರೆ ಶಬ್ದಗಳನ್ನು ಅಳವಡಿಸಿಕೊಂಡು ಇಂಡಿಯಾ ಅಂತ ಮಾಡಿದ್ದಾರೆ. ಭಾರತ ನಮ್ಮ ದೇಶ ಅದರ ಬಗ್ಗೆ ಪ್ರಶ್ನೆ ಮಾಡಲ್ಲ. ಅಕ್ಷರಗಳನ್ನ ಹೊಂದಿಸಿ ಒಂದು ಶಬ್ದವನ್ನು ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದು ರುದ್ರಪ್ಪ ಲಂಬಾಣಿ ಹೇಳಿದರು.
ಇದನ್ನೂ ಓದಿ : ಸನಾತನ ಧರ್ಮ ಏಡ್ಸ್, ಕುಷ್ಠರೋಗ ಇದ್ದಂತೆ : ಡಿಎಂಕೆ ಸಂಸದ ಎ. ರಾಜಾ
ಬರ ಘೋಷಣೆಗೆ ಉಪ ಸಮಿತಿ
ಬರ ಘೋಷಣೆಗೆ ಸರ್ಕಾರ ಉಪ ಸಮಿತಿ ರಚನೆ ಮಾಡಿದೆ. 196 ತಾಲೂಕುಗಳು ಬರದ ಛಾಯೆಗೆ ಒಳಗಾಗಿವೆ. ಎಲ್ಲಾ ಜಿಲ್ಲಾಧಿಕಾರಿಗಳ ಮುಖಾಂತರ ಸಮೀಕ್ಷೆ ತರಿಸಿಕೊಳ್ಳಲಾಗಿದೆ. ತೀವ್ರ ತರಹ ತಾಲೂಕಿನಲ್ಲಿ ತೊಂದರೆ ಆಗಿದೆ. ಅಂತ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗುತ್ತೆ ಎಂದು ತಿಳಿಸಿದರು.
ಬೆಳೆ ಹಾಳಾದ್ರೆ ಮೇವು ಆಗುತ್ತೆ
ಕಳೆದ ತಿಂಗಳು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಹಳಷ್ಟು ಕುಡಿಯುವ ನೀರಿನ ತೊಂದರೆ ಆಗಬಹುದು. ಬಿತ್ತಿದ ಬೆಳೆ ಹಾಳಾಗಿದೆ, ಅದು ದನ ಕರುಗಳಿಗೆ ಮೇವು ಆಗಬಹುದು ಅಷ್ಟೇ. PKK ಸಂಸ್ಥೆಯಿಂದ ಮೂಡಬಿತ್ತನೆ ಮಾಡಬೇಕು ಅಂತ ಕೆಲ ಕಡೆ ಬಿತ್ತನೆ ಮಾಡಿದ್ದೇವೆ. ಮಳೆಗಾಗಿ ಕಾಯ್ತಾ ಇದ್ದೇವೆ ಮಳೆ ಆಗದಿದ್ರೆ, ಅನಿವಾರ್ಯವಾಗಿ ಬರ ಘೋಷಣೆ ಮಾಡಬೇಕಾಗುತ್ತೆ ಎಂದರು.