Friday, December 27, 2024

ಅಂಗನವಾಡಿ ಬಾಡಿಗೆ ಕಟ್ಟದ ಅಧಿಕಾರಿಗಳು : ಶಾಲೆಗೆ ಬೀಗ, ಮಕ್ಕಳು ಬೀದಿಪಾಲು!

ಚಿತ್ರದುರ್ಗ : ಬಾಡಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಕಾರಣ ಅಂಗನವಾಡಿ ಮಕ್ಕಳು ಮತ್ತು ಸಿಬ್ಬಂದಿ ಕೆಲಕಾಲ ಕಟ್ಟಡದ ಹೊರಗೆ ನಿಂತ ಘಟನೆಯೂ ಹೊಸದುರ್ಗ ಪಟ್ಟಣದ 17 ನೇ ವಾರ್ಡ್​ ನಲ್ಲಿ ನಡೆದಿದೆ.

ಕಳೆದ 10 ತಿಂಗಳಾದರೂ ಅಂಗನವಾಡಿ ಕಟ್ಟದ ಬಾಡಿಗೆ ನೀಡದ ಕಾರಣಕ್ಕೆ ಕಟ್ಟದ ಮಾಲೀಕ ಸಾದಿಕ್​ ಶಾಲೆಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಅಂಗನವಾಡಿ ಮಕ್ಕಳು ಮತ್ತು ಸಿಬ್ಬಂದಿ ಕೆಲ ಕಾಲ ಕಟ್ಟಡ ಹೊರಗೆ ನಿಂತುಕೊಳ್ಳುವ ಪರಿಸ್ಥತಿ ನಿರ್ಮಾಣವಾಗಿದೆ.

ಘಟನೆ ವಿಚಾರ ತಿಳಿಯಿತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಡಿಪಿಒ ಅಭಿಲಾಷ ಪರಿಶೀಲನೆ ನಡೆಸಿದ್ದಾರೆ. ಈ  ವೇಲೆ ತಮ್ಮ ಮಕ್ಕಳನ್ನು ಅಂಗನವಾಡಿ ಕಟ್ಟಡದಿಂದ ಹೊರಗಿಡಲು ಕಾರಣರಾದ ಅಧಿಕಾರಿಗಳ ವಿರುದ್ದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡೊಸಿದ್ದಾರೆ.

ಬಳಿಕ ಹೊಸದುರ್ಗ ಪುರಸಭೆ ಸದಸ್ಯರಾದ ಮಂಜುನಾಥ್​ ಮತ್ತು ನಾಗರಾಜ್​ ಕಟ್ಟಡದ ಮಾಲೀಕ ಸಾಧಿಕ್​ ರನ್ನು  ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆದರೇ, ಬಾಡಿಗೆ ಹಣವನ್ನು ಕೊಡದಿದ್ದರೇ ಮತ್ತೆ ಶಾಲೆಗೆ ಬೀಗ ಹಾಕುವ ಎಚ್ಚರಿಕೆಯನ್ನು ಮಾಲೀಕ ಸಾಧಿಕ್​ ಅಧಿಕಾರಿಗಳು ಮತ್ತು ಸದಸ್ಯರಿಗೆ ನೀಡಿ ಬಳಿಕ ಬಾಗಿಲು ತೆರೆದಿದ್ದಾರೆ.

RELATED ARTICLES

Related Articles

TRENDING ARTICLES