ಬೆಳಗಾವಿ : ಮರಾಠಿ ಸಮುದಾಯದ ಮೇಲೆ ನಡೆದ ಲಾಠಿ ಚಾರ್ಜ್ ಹಿನ್ನೆಲೆ ನಿಪ್ಪಾಣಿಯಲ್ಲಿ ಪ್ರತಿಭಟನೆಗೆ ಮುಂದಾದ ಮರಾಠಿ ಸಮುದಾಯ.
ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಮರಾಠಿ ಸಮುದಾಯದ ಪ್ರತಿಭಟನೆಯೋದರಲ್ಲಿ, ಮಹಾ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದರು. ಮಹಿಳೆಯರು, ಯುವಕರು ಹಾಗೂ ವೃದ್ಧರನ್ನು ಸಹ ಲೆಕ್ಕಿಸದೇ ಮಾಡಿದ್ದರು.
ಇದನ್ನು ಓದಿ : ಹಿಟ್ಅಂಡ್ ರನ್ ಕೇಸ್ ; ಆಸ್ಪತ್ರೆಗೆ ಭೇಟಿ ಕೊಟ್ಟ ನಟ ಚಂದ್ರಪ್ರಭ
ಈ ಘಟನೆ ಹಿನ್ನೆಲೆ ಅಮಾನವೀಯವಾಗಿ ನಡೆದ ಘಟನೆಯನ್ನು ಖಂಡಿಸಿ, ಮಹಾ ಪೋಲಿಸರ ವಿರುದ್ಧ ನೂರಾರು ಮರಾಠಿ ಮುಖಂಡರು ಸೇರಿ ಪ್ರತಿಭಟನೆಯನ್ನು ಮಾಡಿದ್ದರೆ.
ಅಷ್ಟೇ ಅಲ್ಲದೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ವಿರುದ್ಧ ನಿಪ್ಪಾಣಿ ತಹಶಿಲ್ದಾರರ ಮೂಲಕ, ಮಾಜಿ ಶಾಸಕ ಕಾಕಾ ಪಾಟೀಲ್, ಶುಭಾಷ್ ಜೋಶಿ, ವೀರಕುಮಾರ್ ಪಾಟೀಲ್ ಹಾಗೂ ನಿಪ್ಪಾಣಿ ನಗರಸಭೆಯ ಮರಾಠಿ ಸದಸ್ಯರು ಭಾಗಿಯಾಗಿ ಪ್ರತಿಭಟನೆಯನ್ನು ಮಾಡಿದ್ದಾರೆ.