Sunday, November 3, 2024

ಶ್ರಾವಣ ಶುಕ್ರವಾರ ಮಹಾಲಕ್ಷ್ಮಿಯ ಆರಾಧನೆ ಹೀಗೆ ಮಾಡಿದ್ರೆ ಶುಭ ಫಲ ಪ್ರಾಪ್ತಿ!

ಬೆಂಗಳೂರು : ಸೆಪ್ಟೆಂಬರ್ 8 ಶ್ರಾವಣ ಶುಕ್ರವಾರ. ಅಂದು ಶ್ರಾವಣ ಶುಕ್ರವಾರ ಇರುವುದರಿಂದ ಶ್ರದ್ಧಾ ಭಕ್ತಿಯಿಂದ ಶ್ರೀ ಮಹಾಲಕ್ಷ್ಮಿಯ ಆರಾಧನೆ ಮಾಡಬೇಕು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಲಕ್ಷಿ ದೇವಿಯ ಪೂಜೆ, ಯಾವ ಮಂತ್ರ ಪಠಣ ಮಾಡಬೇಕು, ನೈವೇದ್ಯಕ್ಕೆ ಏನನ್ನು ಅರ್ಪಿಸಬೇಕು ಎಂದು ಶ್ರೀಗಳು ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಶ್ರಾವಣ ಶುಕ್ರವಾರದಂದು ಶ್ರೀ ಮಹಾಲಕ್ಷ್ಮಿ ದೇವಿಗೆ ಕಮಲ ಮತ್ತು ಸೇವಂತಿಗೆ ಪಾತ್ರೆಯನ್ನು ಸಮರ್ಪಿಸಬೇಕು. ಹೀಗೆ ಪೂಜೆ ಸಲ್ಲಿಸುವುದರಿಂದ ಶುಭ ಫಲ ಪ್ರಾಪ್ತಿಯಾಗಲಿದೆ‌.

“ಓಂ ಹ್ರೀಂ ವಿಷ್ಣು ಪತ್ನಿ ಶ್ರೀ ಮಹಾಲಕ್ಷ್ಮಿ ಹ್ರೀಂ ಹ್ರೀಂ” ಮಂತ್ರವನ್ನು 1008 ಬಾರಿ ಜಪಿಸಬೇಕು. ಕೋಸಂಬರಿ, ಹೆಸರುಬೇಳೆ ಪಾಯಸ, ಚಕ್ಕುಲಿ, ಸಜ್ಜಿಗೆ ನೈವೇದ್ಯ ಮಾಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.

ಮಹಾಲಕ್ಷ್ಮಿಯ ಅನುಗ್ರಹ ಪಡೆದುಕೊಳ್ಳಲು ದೇವಿಯ ಆರಾಧನೆ ಮಾಡಲಾಗುತ್ತದೆ. ಇದರಿಂದ ಸಿರಿ, ಸಂಪತ್ತು ಮತ್ತು ಸೌಭಾಗ್ಯ ಪಡೆದುಕೊಳ್ಳಬಹುದು ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES