Wednesday, December 25, 2024

ಭೂಮಿ-ಚಂದ್ರನ ಜೊತೆ ಆದಿತ್ಯ L-1 ಸೆಲ್ಫಿ ಚಿತ್ರ ಹಂಚಿಕೊಂಡ ಇಸ್ರೋ!

ಬೆಂಗಳೂರು : ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಆದಿತ್ಯ ಎಲ್-1 ಉಪಗ್ರಹ ಯಶಸ್ವಿಯಾಗಿ ಗುರಿಯತ್ತ ಸಾಗುತ್ತಿದೆ. ಒಂದೇ ಫ್ರೇಮ್​ನಲ್ಲಿ ಭೂಮಿ ಮತ್ತು ಚಂದ್ರನ ಜೊತೆ ಆದಿತ್ಯ ಎಲ್1 ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇಸ್ರೋ ಹಂಚಿಕೊಂಡಿದೆ.

ಇದನ್ನೂ ಓದಿ: ಜಾತಿ ತಾರತಮ್ಯ ಇರೋವರೆಗೂ ಮೀಸಲಾತಿ ಬೇಕು : ಮೋಹನ್​ ಭಾಗವತ್​

ಈ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋವನ್ನು ಇಸ್ರೋ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಆದಿತ್ಯ ಎಲ್-1 ಕಳುಹಿಸಿರುವ ಸೆಲ್ಫಿಯಲ್ಲಿ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಒಂದೇ ಫ್ರೇಮ್‌ನಲ್ಲಿ ಕಾಣಬಹುದಾಗಿದೆ. ಆದಿತ್ಯ ಎಲ್-1 ಸೂರ್ಯನ ರಹಸ್ಯಗಳನ್ನು ಅನ್ವೇಷಿಸುವ ಗುರಿಯತ್ತ ಸಾಗುತ್ತಿದ್ದು,ಇದಕ್ಕೆ ಸಂಬಂಧಿಸಿದಂತೆ ಇಸ್ರೋ ಸೆಪ್ಟೆಂಬರ್ 5ರ ಮಂಗಳವಾರದಂದು ಎರಡನೇ ಭೂಕಕ್ಷೆ ಮೇಲೆ ಕಾಲಿಡುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ.

ಪ್ರಸ್ತುತ ಆದಿತ್ಯ ಎಲ್-1 ಉಪಗ್ರಹವು ಹೊಸ ಕಕ್ಷೆಯನ್ನು ಪ್ರವೇಶಿಸಿದ್ದು, ಮುಂದಿನ ಕಕ್ಷೆ ಏರಿಸುವ ತಂತ್ರವನ್ನು ಸೆಪ್ಟೆಂಬರ್ 10 ರಂದು ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.

RELATED ARTICLES

Related Articles

TRENDING ARTICLES