ಮೈಸೂರು : ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಮೈತ್ರಿಯನ್ನು ಸ್ವಾಗತಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವ್ರ ಹೇಳಿಕೆಗೆ ನನ್ನ ಸಹಮತವಿದೆ. ಯಡಿಯೂರಪ್ಪ ಅವ್ರು ಏನು ಹೇಳಿದ್ದರೂ ಪಕ್ಷದ ಒಳಿತಿಗಾಗಿ ಯೋಜನೆ ಮಾಡುತ್ತಾರೆ ಎಂದಿದ್ದಾರೆ.
ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರು. ಪಕ್ಷದ ಹಿತದೃಷ್ಟಿಯಿಂದ ಅವರು ಸರಿಯಾದ ತೀರ್ಮಾನ ಕೈಗೊಂಡಿರುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಎರಡು ಬಾರಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ, ಅವರಿಗೆ ಪಕ್ಷದ ಒಳಿತು ಗೊತ್ತಿದೆ ಎಂದು ಹೇಳಿದ್ದಾರೆ.
HDD ಬಗ್ಗೆ ಹೆಚ್ಚು ಗೌರವ
ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್.ಡಿ ದೇವೇಗೌಡರಿಗೆ ಅತಿ ಹೆಚ್ಚಿನ ಗೌರವ ಕೊಡುತ್ತಾರೆ. ಒಳ್ಳೆಯ ವಿಚಾರ, ಒಳ್ಳೆಯ ಕೆಲಸದ ಬಗ್ಗೆ ದೇವೇಗೌಡರು ಮೋದಿ ಅವರ ಬಗ್ಗೆ ಮೊದಲಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮೈತ್ರಿ ಮಾತು ನಡೆದಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಇನ್ನೂ ಮಹಿಷ ದಸರಾ ಬಗ್ಗೆ ಮಾತನಾಡಿರುವ ಅವರು, ಮಹಿಷ ದಸರವನ್ನ ಈ ಬಾರಿ ನಡೆಸುವುದಕ್ಕೆ ಬಿಡಲ್ಲ. ಮಹಿಷ ದಸರಾ ದಿನ ನಾನು ಅಲ್ಲೇ ಇರ್ತೀನಿ. ಸಂಘರ್ಷ ಆದ್ರೂ ಪರ್ವಾಗಿಲ್ಲ. ಮಹಿಷ ದಸರಾ ಮಾಡಲು ನಾನು ಬಿಡಲ್ಲ ಎಂದು ಹೇಳಿದ್ದಾರೆ.