Wednesday, January 22, 2025

ಇವ್ರ ಮನೆ ಹಾಳಾಗ, ದುಡ್ಡು ಬಂದಿಲ್ಲ ಅಂತವ್ರೆ ಜನ : ಎಸ್.ಆರ್ ವಿಶ್ವನಾಥ್

ಬೆಂಗಳೂರು : ಇವ್ರ ಮನೆ ಹಾಳಾಗ, ಇನ್ನೂ ದುಡ್ಡು ಬಂದಿಲ್ಲ ಅಂತ ಜನ ಇವ್ರಿಗೆ ಉಗಿತವ್ರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಶಾಸಕ ಎಸ್.ಆರ್ ವಿಶ್ವನಾಥ್ ಗುಡುಗಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹನಿಮೂನ್ ಪೀರಿಯಡ್ ಇರುತ್ತೆ. ಮೂರು ತಿಂಗಳು ಗಂಡ-ಹೆಂಡತಿ ಜಗಳದಂತೆ. 200 ಯೂನಿಟ್ ಕರೆಂಟ್ ಫ್ರೀ ಅಂದ್ರು, ಆಮೇಲೆ ಏನ್ ಮಾಡಿದ್ರು ಕಿವಿಗೆ ಹೂ ಇಟ್ರು ಎಂದು ಕುಟುಕಿದರು.

ಗೃಹಲಕ್ಷ್ಮಿ ಹಣಕ್ಕೆ ಕಂಡೀಶನ್ ಹಾಕಿದ್ರು. ಇವ್ರ ಮನೆ ಹಾಳಾಗ ಹಣ ಬಂದಿಲ್ಲ ಅಂತಿದ್ದಾರೆ ಜನ. ಮೊದಲು ಯಜಮಾನಿ ಯಾರು ಅಂತ ತೀರ್ಮಾನ ಮಾಡಿಕೊಂಡು ಬನ್ನಿ ಅಂತಾರೆ. ಬಸ್ ಫ್ರೀ ಮಾಡಿದ್ರು, ಧರ್ಮಸ್ಥಳಕ್ಕೆ ಹೋದ್ರೆ ವಾಪಾಸ್ ಬರೋಕೆ ಆಗ್ತಿಲ್ಲ. ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲ್ಲ ಎಂದು ಚಾಟಿ ಬೀಸಿದರು.

ಪ್ರಕಾಶ್ ರೈ ಮೇಲೆ ಏನಾದ್ರೂ ಕ್ರಮ ಆಗಿದ್ಯಾ?

ರಸ್ತೆಗಳಿಗೆ ಪ್ಯಾಚ್ ಹಾಕೋಕೂ ಗುತ್ತಿಗೆದಾರರು ಬರ್ತಿಲ್ಲ. ಟಾರ್ ಹಾಕೋವಾಗ ಕೊಡಬೇಕು, ಬಿಲ್ ಆಗೋಕೂ ಕೊಡಬೇಕು ಸರ್ ಅಂತಿದ್ದಾರೆ. ಆಗಿರೋ ಕೆಲಸಕ್ಕೆ 15% ಕಮಿಷನ್ ಕೇಳಿದ್ದಾರೆ. ಗುತ್ತಿಗೆದಾರರಿಗೆಲ್ಲಾ ಧಮ್ಕಿ ಹಾಕ್ತಿದ್ದಾರೆ. ನಮ್ಮ ಕಾರ್ಯಕರ್ತರು ಏನಾದ್ರೂ ಪೋಸ್ಟ್ ಮಾಡಿದ್ರೆ ಅರೆಸ್ಟ್ ಮಾಡ್ತಾರೆ. ಆ ಪ್ರಕಾಶ್ ರೈ ಮೇಲೆ ಏನಾದ್ರೂ ಕ್ರಮ ಆಗಿದ್ಯಾ? ಇಸ್ರೋ ವಿಜ್ಞಾನಿಗಳ ಬಗ್ಗೆ ಅಣಕಿಸಿದ್ರೂ ಅರೆಸ್ಟ್ ಮಾಡಿಲ್ಲ ಎಂದು ಫುಲ್ ಗರಂ ಆದರು.

ಬಿಎಸ್​ವೈ ಭೀಷ್ಮಾಚಾರ್ಯ ಎದ್ದಿದ್ದಾರೆ

ದೇವರ ಹೆಸರುಗಳನ್ನ ಇಟ್ಟುಕೊಳ್ತಾರೆ. ಕುರಿ, ಕೋಳಿ, ನಾಯಿ ಅಂತ ಹೆಸರಿಟ್ಟುಕೊಳ್ಳಿ. ಸ್ಟಾಂಪ್ ಬೆಲೆ ಏರಿಕೆ, ಹಾಲಿನ ದರ ಏರಿಕೆ ಆಗಿದೆ. ಐದು ವರ್ಷಕ್ಕಲ್ಲ ಮೂರೇ ತಿಂಗಳಿಗೆ ಕೆಟ್ಟ ಹೆಸರು ತಂದುಕೊಂಡಿದ್ದಾರೆ. ನಮ್ಮದೇ ಸರ್ಕಾರ ಇರಬೇಕಿತ್ತು. ಬಿಎಸ್​ವೈ ಭೀಷ್ಮಾಚಾರ್ಯ ಎದ್ದಿದ್ದಾರೆ, 25 ಸ್ಥಾನ ಗೆಲ್ಲಲೇಬೇಕು. ಮೋದಿ ಪ್ರಧಾನಿ ಆಗದಿದ್ರೆ ಡಿಎಂಕೆಯವರು ಹೇಳಿರೋದೇ ಆಗುತ್ತೆ. ನಾವು ಊಹಿಸಲಾಗದ ಸ್ಥಿತಿಗೆ ಹೋಗ್ತೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES