Monday, December 23, 2024

ಈ ಅನಿಷ್ಠ ಸರ್ಕಾರದ ವಿರುದ್ಧ ಬಲಿಷ್ಠ ಸರ್ಕಾರ ಬರಬೇಕಿದೆ : ಬೊಮ್ಮಾಯಿ

ಬೆಂಗಳೂರು : ನಮ್ಮ ಸರ್ವೋಚ್ಛ ನಾಯಕ ಬಿಎಸ್ ವೈ ನೇತೃತ್ವದಲ್ಲಿ ರಣಕಹಳೆ ಊದಿದ್ದೇವೆ. ಒಂದು ವರ್ಷ ನಿರಂತರವಾಗಿ ಮನೆ ಮನೆಗೆ ಹೋಗಿ ಜಾಗೃತಿ ಮಾಡ್ತೇವೆ. ಈ ಅನಿಷ್ಠ ಸರ್ಕಾರದ ವಿರುದ್ಧ ಬಲಿಷ್ಠ ಸರ್ಕಾರ ಬರಬೇಕಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳಿಗೆ ಜಂಟಿ ಸಹಿ ಹಾಕಿಕೊಟ್ರು. ಏನ್ ಸಿದ್ದರಾಮಯ್ಯ ಬಂದ್ಮೇಲೆನೇ ಅನ್ನ ಕೊಟ್ಟಿದ್ದು. ರೇಶನ್ ಕೊಡೋದು ಬ್ರಿಟಿಷರ ಕಾಲದಿಂದಲೂ ಇತ್ತು. ಯಡಿಯೂರಪ್ಪ ಇದ್ದಾಗ 30 ಕೆ.ಜಿ ಕೊಡ್ತಿದ್ರು. ಇವ್ರು ಬಂದ್ಮೇಲೆ 7 ಕೆ.ಜಿಗೆ ಇಳಿಸಿದ್ರು. 5 ಕೆ.ಜಿ ಅಕ್ಕಿ ಕೊಡ್ತಿರೋದು ನರೇಂದ್ರ ಮೋದಿ, ಇವ್ರು ಒಂದೇ ಒಂದು ಕಾಳು ಅಕ್ಕಿ ಕೊಟ್ಟಿಲ್ಲ. ಅಕ್ಕಿ ಬದಲು 18 ರೂಪಾಯಿ ಹಣ ಕೊಡ್ತಿದ್ದಾರೆ. ಮಾರ್ಕೆಟ್ ನಲ್ಲಿ ಅಕ್ಕಿ ಬೆಲೆ 50 ರೂ. ಇದೆ ಎಂದು ಛೇಡಿಸಿದರು.

ಅರ್ಧ ದಿನದ ಕೂಲಿಯೂ ಕೊಡ್ತಿಲ್ಲ

ನಮ್ಮ ಹೆಣ್ಣುಮಕ್ಕಳ ಅರ್ಧ ದಿನದ ಕೂಲಿಯೂ ಕೊಡ್ತಿಲ್ಲ. ಜೀರೋ ಕರೆಂಟ್ ಬಿಲ್ ಅಂದ್ರು, ರಾಜ್ಯವನ್ನು ಕತ್ತಲಿಗೆ ದೂಡಿದ್ದಾರೆ. ಮಳೆ ಬರ, ಕರೆಂಟ್ ಬರ ಬಂದಿದೆ. ಗೃಹಲಕ್ಷ್ಮಿ ಎಷ್ಟೋ ಜನಕ್ಕೆ ಬಂದಿಲ್ಲ. ಕಾಂಗ್ರೆಸ್​ಗೆ ಮುಳ್ಳಾಗುತ್ತೆ, ಜನ ಎದ್ದೇಳ್ತಾರೆ. ಒಬ್ಬ ಅಧಿಕಾರಿಗೆ ಹುದ್ದೆಗೆ ಎಂಟು ಕೋಟಿ ಕೊಟ್ಟಿದ್ದಾನೆ. ಒಬ್ಬೊಬ್ರ ಬಳಿ 13 ಕೋಟಿ ತಗೊಂಡಿದ್ದಾರೆ. ಕುಮಾರಕೃಪಾದಲ್ಲಿ ಕಮಿಷನ್ ದಂಧೆ, ಹಗಲು ದರೋಡೆ ನಡೀತಿದೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES