Sunday, January 5, 2025

ಮದ್ಯದ ಅಮಲಿನಲ್ಲಿ ಮೈ-ಕೈ ,ಕತ್ತು ಕೊಯ್ದುಕೊಂಡು ವ್ಯಕ್ತಿ ಸಾವು

ದಾವಣಗೆರೆ : ಎಣ್ಣೆ ಮತ್ತಲ್ಲಿ ವ್ಯಕ್ತಿಯೊಬ್ಬ ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಮೃತಪಟ್ಟಿರುವ ಘಟನೆ ಚನ್ನಗಿರಿ ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ನಡೆದಿದೆ.

ಮೂಲತಃ ನಿಟ್ಟೂರು ಗ್ರಾಮದವನಾದ ಬಸವರಾಜಪ್ಪ (32) ಮೃತ ವ್ಯಕ್ತಿ. ಎಂಬುವನು ತಂದೆ- ತಾಯಿಯನ್ನು ಕಳೆದುಕೊಂಡ ಹಿನ್ನೆಲೆ ಸೋಮಶೆಟ್ಟಿಹಳ್ಳಿಯ ತಮ್ಮ ಸಹೋದರಿಯ ಮನೆಯಲ್ಲಿ ವಾಸವಾಗಿದ್ದನು. ಅತಿಯಾದ ಮಧ್ಯ ಸೇವನೆಯಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದನು.

ಇದನ್ನು ಓದಿ : ಸಿನಿಮಾ ಸ್ಟೈಲ್ ನಲ್ಲಿ ಯುವತಿಯ ಕಿಡ್ನಾಪ್ ಯತ್ನ

ಇದರ ಬೆನ್ನಲ್ಲೇ ನಿನ್ನೆ ಮದ್ಯದ ಅಮಲಿನಲ್ಲಿ ಕ್ಷೌರದ ಅಂಗಡಿಗೆ ಹೋಗಿದ್ದ ಬಸವರಾಜ್, ರೇಜರ್ ತೆಗೆದುಕೊಂಡು ಮೈ-ಕೈ ಮತ್ತು ಕತ್ತು ಕೊಯ್ದುಕೊಂಡಿದ್ದಾನೆ. ಬಳಿಕ ರಕ್ತ ಸುರಿಯುತ್ತಿದ್ದರು ಬೀದಿ ಬೀದಿ ತಿರುಗಾಡುತ್ತಿದ್ದು, ತಕ್ಷಣ ಚಿಕಿತ್ಸೆಗಾಗಿ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.

ದುರಾದೃಷ್ಟವಶಾತ್ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

RELATED ARTICLES

Related Articles

TRENDING ARTICLES