Tuesday, November 5, 2024

ಕ್ಷಮಿಸು ಸೌಜನ್ಯ : ಪವರ್ ಟಿವಿ ಸತ್ಯ ಶೋಧನೆ!

ಬೆಂಗಳೂರು : ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.

ಆರೋಪಿ ಸ್ಥಾನದಲ್ಲಿದ್ದ ಸಂತೋಷ್ ರಾವ್​​​​ ಕೃತ್ಯ ಮಾಡಿರುವುದನ್ನ ಸಾಬೀತು ಮಾಡಲಾರದ ಕಾರಣ ನಿರ್ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ ನಂತರ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಪ್ರಕರಣದ ಮರು ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನ ಒತ್ತಾಯಿಸಲಾಗುತ್ತಿದೆ.

ನಿಜವಾದ ಆರೋಪಿಗಳಿಗೆ ಶಿಕ್ಷೆಯಾದರೆ ಸೌಜನ್ಯಗೆ ಸೂಕ್ತ ನ್ಯಾಯ ಸಿಕ್ಕಂತಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆಯಾಗಲೀ ಅಥವಾ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧವಾಗಲೀ ಮಾತನಾಡುವುದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಇದರ ಹೊರತಾಗಿಯೂ ಸೌಜನ್ಯ ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕೆಂಬುದು ಪವರ್ ಟಿವಿಯ ಕಳಕಳಿ.

ಅದೇ ರೀತಿ, ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದು ಎಷ್ಟು ನಿಜವೋ ದಾಖಲೆಗಳಿಲ್ಲದೆ ಒಬ್ಬರ ಮೇಲೆ ಆರೋಪವನ್ನಾಗಲೀ ಅಥವಾ ತೇಜೋವಧೆ ಮಾಡುವುದಾಗಲೀ ಮಾಡಬಾರದು ಎಂಬ ಎಚ್ಚರಿಕೆಯೂ ಪವರ್ ಟಿವಿಗೆ ಇದೆ.

ನ್ಯಾಯಾಲಯದ ಮೇಲೆ ಗೌರವ

ಪವರ್ ಟಿವಿ ನ್ಯಾಯಾಲಯದ ಮೇಲೆ ಅಪಾರ ಗೌರವ ಹೊಂದಿದೆ. ಅಂತೆಯೇ ಸೌಜನ್ಯ ಪ್ರಕರಣದ ಕುರಿತು ನಡೆಯುತ್ತಿರುವ ಪ್ರತಿಭಟನೆಗಳನ್ನೂ ಗೌರವಿಸುತ್ತದೆ. ಸೌಜನ್ಯ ಪ್ರಕರಣ ಸಂಬಂಧ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ನೈಜ ಅಪರಾಧಿಗಳ ಪತ್ತೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸೌಜನ್ಯಗೆ ನ್ಯಾಯ ಸಿಗಬೇಕು ಎಂಬುದು ಪವರ್ ಟಿವಿಯ ಆಗ್ರಹವೂ ಕೂಡ.

ಸತ್ಯಾಸತ್ಯತೆ ಬಗ್ಗೆ ‘ಪವರ್’ ವಿಮರ್ಶೆ

ಜವಾಬ್ದಾರಿಯುತ ಸುದ್ದಿ ಮಾಧ್ಯಮವಾಗಿ ಪವರ್ ಟಿವಿ ಕೂಡ ಸೌಜನ್ಯ ಕೇಸ್ ಮರು ತನಿಖೆಗೆ ಒತ್ತಾಯಿಸುತ್ತದೆ. ಪ್ರಕರಣಕ್ಕೆ ಕಾರಣರಾದವರು ಪತ್ತೆಯಾಗಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಪವರ್ ಟಿವಿಯ ಗಟ್ಟಿ ನಿಲುವು. ಅಂತೆಯೇ ಸತ್ಯಾಸತ್ಯತೆಗಳ ಬಗ್ಗೆಯೂ ವಿಮರ್ಶೆ ಮಾಡುವ ಕೆಲಸವನ್ನು ಕೂಡ ಪವರ್ ಟಿವಿ ಮುಂದುವರಿಸಲಿದೆ.

RELATED ARTICLES

Related Articles

TRENDING ARTICLES