Wednesday, January 22, 2025

ಭಾಷೆ ತಮಿಳಿನಲ್ಲಿದೆ, ನನಗೆ ತಮಿಳು ಬರಲ್ಲ : ಸತೀಶ್ ಜಾರಕಿಹೊಳಿ

ಬೆಂಗಳೂರು : ಸನಾತನ ಧರ್ಮದ ಬಗ್ಗೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಮತ್ತೆ ಗದ್ದಲ ಆರಂಭವಾಗಿರುವ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾಷೆ ತಮಿಳಿನಲ್ಲಿದೆ, ನನಗೆ ತಮಿಳು ಬರಲ್ಲ. ಅದನ್ನು ಇನ್ನು ನಾನು ಅರ್ಥಮಾಡಿಕೊಂಡಿಲ್ಲ. ಹಿಂದೂ ಹಾಗೂ ಸನಾತನ ಧರ್ಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.

ಚುನಾವಣೆ ಸಮಯದಲ್ಲಿ ಹಿಂದೂ ಧರ್ಮ ಅಲ್ಲ, ಅದು ಆಚರಣೆ ಎಂಬ ವಿಚಾರ. ಹಿಂದೂ ದರ್ಮದ ಬಗ್ಗೆ  ಹೇಳಿಲ್ಲ, ಪುಸ್ತಕದಲ್ಲಿ ಏನಿದೆ ಅಂತ ಹೇಳಿದ್ದೀನಿ. ನಾವೇ ಸ್ವಂತವಾಗಿ ಏನು ಹೇಳಿಲ್ಲ. ದೇಶದಲ್ಲಿ ಬಹಳಷ್ಟು ಜಾತಿ ಧರ್ಮಗಳಿವೆ. ಧರ್ಮಾಚರಣೆ ಅದು ಅವರ ವೈಯಕ್ತಿಕ ವಿಚಾರ, ಅವರ ಇಷ್ಟ. ಆಚರಣೆ ವೈಯ್ಯಕ್ತಿಕ ವಿಚಾರವನ್ನು ನಾವು ಹೇಳಕೆ ಆಗೊಲ್ಲ ಎಂದು ತಿಳಿಸಿದ್ದಾರೆ.

ಸನಾತನ ಧರ್ಮ ಏಡ್ಸ್

ಸನಾತನ ಧರ್ಮ ಡೆಂಘೀ, ಮಲೇರಿಯಾವಲ್ಲ. ಏಡ್ಸ್ (HIV) ರೋಗಿವಿದ್ದಂತೆ ಎಂದು ಡಿಎಂಕೆ ಸಂಸದ ಎ. ರಾಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಸನಾತನ ಮತ್ತು ವಿಶ್ವಕರ್ಮ ಯೋಜನೆ ಒಂದೇ. ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES