Sunday, November 3, 2024

ಕಾಂಗ್ರೆಸ್ ‘ನೆಹರು ಫ್ಯಾಮಿಲಿ’ ಹಿತಾಸಕ್ತಿ ಮಾತ್ರ ಕಾಪಾಡಿದೆ : ಬಿಜೆಪಿ

ಬೆಂಗಳೂರು : ಕಾಂಗ್ರೆಸ್ ಕೇವಲ ಜವಾಹರಲಾಲ್ ನೆಹರು ಅಂಡ್ ಫ್ಯಾಮಿಲಿಯ ಹಿತಾಸಕ್ತಿಯನ್ನು ಮಾತ್ರ ಕಾಪಾಡಿದೆ ಎಂದು ರಾಜ್ಯ ಬಿಜೆಪಿ ಕುಟುಕಿದೆ.

ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿರುವ ಹಿನ್ನೆಲೆ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್​ಗೆ ತಿರುಗೇಟು ನೀಡಿದೆ. ​

ಸಿದ್ದರಾಮಯ್ಯ ಅವ್ರೇ, ತಮ್ಮ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಆಶಯಗಳೆಲ್ಲವನ್ನೂ ಬದಿಗೊತ್ತಿದೆ. ಹಾಗಾಗಿ, ಕಾಂಗ್ರೆಸ್‌ಗೆ ಮಹಾತ್ಮ ಗಾಂಧೀಜಿ ಸೇರಿದಂತೆ ಮಹಾನ್ ಚೇತನಗಳ ಬಗ್ಗೆ ಮಾತನಾಡಲು ಯಾವ ಅರ್ಹತೆಯೂ ಇಲ್ಲ, ಯೋಗ್ಯತೆಯೂ ಉಳಿದಿಲ್ಲ ಎಂದು ಛೇಡಿಸಿದೆ.

ಗಾಂಧಿ ಮಾತಿಗೆ ಕ್ಯಾರೆ ಎನ್ನಲಿಲ್ಲ

ನೆಹರು ಅವರನ್ನು ಹೊರತುಪಡಿಸಿ, ಉಳಿದವರೆಲ್ಲರಿಗೂ ಕಾಂಗ್ರೆಸ್ ಪಕ್ಷ ಮಾಡಿದ ಮಹಾಮೋಸಗಳೆಲ್ಲವೂ ಇತಿಹಾಸದ ಪುಟಗಳಲ್ಲಿ ಬಟಾಬಯಲಾಗಿದೆ. ಸುಳ್ಳು ನುಡಿಯುವ ಮುನ್ನ ಆ ಇತಿಹಾಸದ ಪುಟಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ದೇಶಕ್ಕೆ ಮಾರಕ ಎಂಬ ಕಾರಣಕ್ಕೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸನ್ನು ವಿಸರ್ಜಿಸಿ ಎಂದಿದ್ದರು. ಆದರೆ, ನೆಹರು ತಮ್ಮ ಸ್ವಾರ್ಥಕ್ಕಾಗಿ ಗಾಂಧೀಜಿಯವರ ಮಾತಿಗೆ ಕ್ಯಾರೆ ಎನ್ನಲಿಲ್ಲ ಎಂದು ಚಾಟಿ ಬೀಸಿದೆ.

ಆತ್ಮವಂಚನೆ ಕೊಡ ತುಂಬಿದೆ

ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್. ಸ್ವಾತಂತ್ರ್ಯದ ಬಳಿಕ ಇಲ್ಲಿಯವರೆಗೂ ನೆಹರು ಕುಟುಂಬದವರ ಪ್ರತಿಮೆಗಳು ಮಾತ್ರ ದೇಶಾದ್ಯಂತ ಮೇಳೈಸಿದ್ದವು. ಸರ್ದಾರ್ ಪಟೇಲ್‌ರವರ ಏಕತೆಯ ಪ್ರತಿಮೆ ನಿರ್ಮಿಸಲು ಬಿಜೆಪಿ ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್. ಸುಳ್ಳಾಡುತ್ತಲೇ ತಮ್ಮ ಆತ್ಮವಂಚನೆಯ ಕೊಡವೂ ತುಂಬಿದೆ ಎಂದು ಗುಡುಗಿದೆ.

RELATED ARTICLES

Related Articles

TRENDING ARTICLES