ಗದಗ : ನಾನು ಸನಾತಪ ಧರ್ಮದಲ್ಲಿ ಹುಟ್ಟಿಲ್ಲ ಎಂದಿರುವ ಬಹುಭಾಷಾ ನಟ ಪ್ರಕಾಶ್ ರಾಜ್ಗೆ ಶ್ರೀ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿರುಗೇಟು ಕೊಟ್ಟಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರಾಜ್ ಅವರ ತಂದೆ ಸನಾತನ ಧರ್ಮದಲ್ಲಿಯೇ ಹುಟ್ಟಿದ್ದು. ಹೀಗಾಗಿ, ನೀನು ಸನಾತನ ಧರ್ಮದಲ್ಲಿಯೇ ಹುಟ್ಟಿದ್ದೀಯ ಎಂದು ಕುಟುಕಿದ್ದಾರೆ.
ಪ್ರಕಾಶ್ ರಾಜ್, ನೀನೇನು ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾದಲ್ಲಿ ಹುಟ್ಟಿಲ್ಲ. ಹಿಂದೂಸ್ತಾನದಲ್ಲಿ ಹುಟ್ಟಿದವರೆಲ್ಲರೂ ಹಿಂದೂಗಳೇ ಆಗ್ತಾರೆ. ನೀವೇನೇ ಬೋರ್ಡ್ ಹಾಕೊಂಡ್ರೂ ಸಹಿತ ಸನಾತನ ಧರ್ಮ ಅನ್ನೋದು ಇರುತ್ತೆ. ಪ್ರಕಾಶ್ ರಾಜ್ ನಟನೆಗೆ ಸೆಲ್ಯೂಟ್ ಹೊಡೆಯುತ್ತೇವೆ. ಆದ್ರೆ, ಎಲ್ಲದರಲ್ಲೂ ಮೂಗು ತೋರಿಸುವ ಪ್ರಯತ್ನ ಸರಿ ಅಲ್ಲ. ಹಿಂದೂ ಧರ್ಮ ಟೀಕೆ ಮಾಡೋದು ಅವಮಾನ ಮಾಡೋದು ಶೋಭೆ ತರಲ್ಲ ಎಂದು ಚಾಟಿ ಬೀಸಿದ್ದಾರೆ.
ಪ್ರಕಾಶ್ ರಾಜ್ ಹೇಳಿದ್ದೇನು?
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ.. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ. ನಾನು ಧರ್ಮದ ವಿರುದ್ಧ ಅಲ್ಲ, ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಎಂದು ಬಹುಭಾಷಾ ನಟ ಪ್ರಕಾಶ್ ರೈ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಹೇಳಿದ್ದರು.
ಅವರಿಗೆ ಚೀನಾವೇ ಬೆಸ್ಟ್
ಚಂದ್ರಯಾನ-3 ಬಗ್ಗೆ ಲಘುವಾಗಿ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಮುತಾಲಿಕ್ ಕಿಡಿಕಾರಿದ್ದರು. ಪ್ರಕಾಶ್ ರಾಜ್ ಹಾಗೂ ಮತ್ತಿತರ ಬುದ್ಧಿಜೀವಿಗಳು ಭಾರತ ದೇಶದಲ್ಲೇ ಹುಟ್ಟಿದ್ದೇ ಒಂದು ದೊಡ್ಡ ಕಳಂಕ. ಅವರೆಲ್ಲ ಚೀನಾದಲ್ಲಿ ಹುಟ್ಟಬೇಕಿತ್ತು. ಅವರಿಗೆ ಚೀನಾವೇ ಬೆಸ್ಟ್. ಅಲ್ಲಿ ನಾಸ್ತಿಕರಿದ್ದಾರೆ ಎಂದು ಗುಡುಗಿದ್ದರು.