Monday, December 23, 2024

ದೇಶದ ಹೆಸರು ಬದಲಿಸುವ ಸುದ್ದಿ ಕೇವಲ ವದಂತಿ: ಕೇಂದ್ರ ಸಚಿವ ಅನುರಾಗ್​ ಠಾಕೂರ್

ನವದೆಹಲಿ ಕೇಂದ್ರ ಸರ್ಕಾರದ ಎದುರು ದೇಶದ ಹೆಸರನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೆಂದ್ರ ಸಚಿವ ಅನುರಾಗ್​ ಠಾಕೂರ್​ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ “ಭಾರತ ಎಂಬ ಪದದೊಂದಿಗೆ ಪ್ರತಿಪಕ್ಷಗಳಿಗೆ ಏಕೆ ಇಷ್ಟೊಂದು ಸಮಸ್ಯೆ ಇದೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಟಿ ರಮ್ಯಾ ಅನಾರೋಗ್ಯದಿಂದ ಸಾವು : ತಮಿಳು ಚಾನಲ್​ ಗಳಲ್ಲಿ ವೈರಲ್​!

ಖಾಸಗಿ ಮಾದ್ಯಕ್ಕೆ ಹೇಳಿಕೆ ನೀಡಿರುವ ಕೇಂದ್ರ ಕ್ಯಾಬಿನೆಟ್ ಸಚಿವ ಅನುರಾಗ್ ಠಾಕೂರ್, “ಹೆಸರನ್ನು ಬದಲಾಯಿಸುವ ಸುದ್ದಿ ಕೇವಲ ವದಂತಿಯಾಗಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸಲಾಗುವುದಿಲ್ಲ. ನಾನು ಭಾರತ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಇಂಡಿಯಾ ಮತ್ತು ಭಾರತ ಎರಡನ್ನೂ ಜಿ20ಯಲ್ಲಿ ಬರೆಯಲಾಗಿದೆ. ಹಾಗಾದರೆ ಅನಗತ್ಯ ವದಂತಿಗಳನ್ನು ಏಕೆ ಹರಡಲಾಗುತ್ತಿದೆ? ಇಂತಹ ವದಂತಿಗಳನ್ನು ಹರಡುತ್ತಿರುವವರು ಯಾರು?

ಭಾರತ ಎಂಬ ಪದದಿಂದ ಏನು ಸಮಸ್ಯೆ ಇರಬಹುದು? ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ, ಅವರಿಗೆ ಭಾರತದ ವಿರುದ್ಧ ವಿರೋಧವಿದೆ. ಬಹುಶಃ ಅದಕ್ಕಾಗಿಯೇ ಅವರು ವಿದೇಶಕ್ಕೆ ಹೋದಾಗ ಅಲ್ಲಿ ಭಾರತವನ್ನು ಟೀಕಿಸುತ್ತಾರೆ” ಎಂದು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES