ಬೆಂಗಳೂರು : ಕಾವೇರಿ ನೀರಿನ ವಿವಾದ, ಬರಗಾಲ ಕುರಿತು ರಾಜ್ಯ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಅಯ್ಯಯ್ಯೋ.. ಬರಗಾಲ, ಕ್ಷಾಮ ಕರ್ನಾಟಕದಲ್ಲಿ ತಾಂಡವವಾಡುತ್ತಿದೆ. ಮಾನ್ಯ ಸಿದ್ದರಾಮಯ್ಯ ಅವ್ರೇ, ಏಳಿ ಎದ್ದೇಳಿ.. ನಿದ್ದೆಯಿಂದ ಹೊರ ಬನ್ನಿ ಎಂದು ಕುಟುಕಿದೆ.
ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ 70ಕ್ಕೂ ಹೆಚ್ಚು ರೈತರ ಸಾವಾಗಿದೆ. ಅನ್ನದಾತನ ಆತ್ಮಹತ್ಯೆ ಸರಣಿ ನಿಲ್ಲುತ್ತಿಲ್ಲ. ಬೆಳೆ ಬೆಳೆದ ನಮ್ಮ ರೈತರಿಗೆ ಕಾವೇರಿ ನೀರು ಇಲ್ಲ. ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ಸ್ ಕಾವೇರಿ ನೀರು ಹರಿಯುತ್ತಿದೆ. ಕುಡಿಯುವ ನೀರಿಗೂ ರಾಜ್ಯದಲ್ಲಿ ಹಾಹಾಕಾರ, ನಿಲ್ಲುತ್ತಿಲ್ಲ ಕಲುಷಿತ ನೀರು ಪೂರೈಕೆ, ಅಪಾರ ಸಾವು ನೋವು ಮುಂದುವರಿದಿದೆ ಎಂದು ಛೇಡಿಸಿದೆ.
ಬರಗಾಲ ಘೋಷಿಸದೆ ಮೊಂಡಾಟ
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ದುರಾಡಳಿತಕ್ಕೆ ಕಡಿವಾಣ ಹಾಕಿ. ಮೊದಲೇ ಬೆಲೆ ಏರಿಕೆಗೆ ರೋಸಿ ಹೋಗಿದ್ದ ಜನರ ಮೇಲೆ ಇದೀಗ ಪ್ರತಿ ಕಿಲೋ ಅಕ್ಕಿ ಬೆಲೆ 10 ರಿಂದ 20 ರೂ. ಏರಿಕೆಯ ಹೊರೆ. 135 ತಾಲೂಕುಗಳಲ್ಲಿ ಬರ ಬಂದಿದ್ದರೂ, ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೆ ಮೊಂಡಾಟ ಪ್ರದರ್ಶಿಸಿದೆ. ಆಡಳಿತದ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಈ ಪರಿ ಮೌನಕ್ಕೆ ಶರಣಾಗಿರುವುದು ಕನ್ನಡಿಗರ ದುರಂತ ಎಂದು ಚಾಟಿ ಬೀಸಿದೆ.
ಅಯ್ಯಯ್ಯೋ..! ಬರಗಾಲ, ಕ್ಷಾಮ ಕರ್ನಾಟಕದಲ್ಲಿ ತಾಂಡವವಾಡುತ್ತಿದೆ, ಏಳಿ ಎದ್ದೇಳಿ ನಿದ್ದೆಯಿಂದ ಹೊರ ಬನ್ನಿ ಮಾನ್ಯ @siddaramaiah ಅವರೇ…!
👳 ನಿಲ್ಲುತ್ತಿಲ್ಲ ಅನ್ನದಾತನ ಆತ್ಮಹತ್ಯೆ ಸರಣಿ, ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ 70ಕ್ಕೂ ಹೆಚ್ಚು ರೈತರ ಸಾವು..!
💧 ಬೆಳೆ ಬೆಳೆದ ನಮ್ಮ ರೈತರಿಗಿಲ್ಲ ಕಾವೇರಿ ನೀರು, ತಮಿಳುನಾಡಿಗೆ…
— BJP Karnataka (@BJP4Karnataka) September 5, 2023