Sunday, November 17, 2024

ವರ್ಷದಲ್ಲಿ 3 ಬಾರಿ SSLC, ದ್ವಿತೀಯ PUC ಪರೀಕ್ಷೆ

ಬೆಂಗಳೂರು : ದ್ವೀತಿಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಇನ್ನುಂದೆ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ನಡೆಸಲು ತಿರ್ಮಾನ ಮಾಡಿದ ಶಿಕ್ಷಣ ಇಲಾಖೆ.

ಮಕ್ಕಳ ಕಲಿಕೆಯ ಚೇತರಿಕೆಯ ಹಿನ್ನೆಲೆ SSLC ಮತ್ತು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ 3 ಬಾರಿ ಪರೀಕ್ಷೆ ಮಾಡುವುದರ ಕುರಿತು ಶಿಕ್ಷಣ ಇಲಾಖೆ ಮಂಡಳಿ ಆದೇಶ ಹೊರಡಿಸಿದೆ. ಈ ಆದೇಶವನ್ನು 2023-24 ನೇ ಶೈಕ್ಷಣಿಕ ವರ್ಷದಿಂದ ಈ ನಿಯಮವನ್ನು ಜಾರಿಗೆ ತರಲು ತಿರ್ಮಾನ ಮಾಡಲಾಗಿದೆ.

ಇದನ್ನು ಓದಿ : ಮೋದಿಗೆ INDIA ಬಗ್ಗೆ ಇಷ್ಟೊಂದು ಭಯವೇ? : ದಿನೇಶ್ ಗುಂಡೂರಾವ್

ಈ ಹಿನ್ನೆಲೆ ಈಗಾಗಲೇ ಸಂಭವನೀಯ ವೇಳಾಪಟ್ಟಿಯನ್ನು ಹೊರಡಿಸಿರುವ ಇಲಾಖೆ ಮಂಡಳಿ. ಆ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ.

ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು

  •  ಮೊದಲ ಪರೀಕ್ಷೆ: ಮಾರ್ಚ 1ರಿಂದ ಮಾರ್ಚ್​ 25ರವರೆಗೂ ನಡೆಯಲಿದ್ದು, ಏಪ್ರಿಲ್ 22ಕ್ಕೆ ಫಲಿತಾಂಶ ಹಾಗೂ ಮೇ 10 ರಂದು ಮರು ಮೌಲ್ಯಮಾಪನ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
  • ಎರಡನೇ ಪರೀಕ್ಷೆ : ಮೇ 15ರಿಂದ ಜೂನ್ 5ರವರೆಗೆ ನಡೆಯಲಿದ್ದು, ಬಳಿಕ ಜೂನ್ 21 ರಂದು ಫಲಿತಾಂಶ ಪ್ರಕಟಿಸಿ, ಜೂನ್ 29ಕ್ಕೆ ಮರು ಮೌಲ್ಯ ಮಾಪನ ಫಲಿತಾಂಶ ಪ್ರಕಟಿಸಲಾಗುತ್ತದೆ.
  • ಮೂರನೇ ಪರೀಕ್ಷೆ : ಜುಲೈ 12 ರಿಂದ ಜುಲೈ 30 ರವರೆಗೂ ನಡೆಯಲಿದ್ದು, ಆಗಸ್ಟ್ 16ರಂದು ಫಲಿತಾಂಶ ಪ್ರಕಟಿಸಿ, ಆಗಸ್ಟ್ 25 ಮರು ಮೌಲ್ಯ ಮಾಪನ ಫಲಿತಾಂಶ ಪ್ರಕಟಿಸಲಾಗುತ್ತದೆ.

ಹತ್ತನೇ ತರಗತಿ ವಿದ್ಯಾರ್ಥಿಗಳು

  • ಮೊದಲ ಪರೀಕ್ಷೆ : ಮಾರ್ಚ್​ 30ರಿಂದ ಏಪ್ರಿಲ್ 15 ರವರೆಗೂ ನಡೆಯಲಿದ್ದು, ಮೇ 8ರಂದು ಫಲಿತಾಂಶ ಪ್ರಕಟ. ಹಾಗೂ ಮೇ 23 ರಂದು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಿಸಲಾಗುತ್ತದೆ.
  • ಎರಡನೇ ಪರೀಕ್ಷೇ : ಜೂನ್ 12ರಿಂದ ಜೂನ್ 19ರವರೆಗೂ ನಡೆಯಲಿದ್ದು, ಜೂನ್ 29 ರಂದು ಫಲಿತಾಂಶ ಪ್ರಕಟ. ಮತ್ತು ಜುಲೈ 10 ರಂದು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟವಾಗುತ್ತದೆ.
  • ಮೂರನೇ ಪರೀಕ್ಷೆ : ಜುಲೈ 29 ರಿಂದ ಆಗಸ್ಟ್ 5ರವರೆಗೂ ನಡೆಯಲಿದ್ದು, ಆಗಸ್ಟ್ 19ರಂದು ಫಲಿತಾಂಶ ಪ್ರಕಟ. ಹಾಗೂ ಆಗಸ್ಟ್ 26 ರಂದು ಮರು ಮೌಲ್ಯ ಮಾಪನ ಫಲಿತಾಂಶ ಪ್ರಕಟವಾಗುತ್ತದೆ.

ವಿದ್ಯಾರ್ಥಿಗಳ ಕಲಿಕೆಯಲ್ಲಿ ಚೇತರಿಕೆಯನ್ನು ಹೆಚ್ಚಿಸಲು ಶಿಕ್ಷಣ ಇಲಾಖೆಯವರು ಈ ರೀತಿಯ ವೇಳಾಪಟ್ಟಿಯನ್ನು ತಯಾರಿಸಿ 2023 24ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES