Thursday, December 19, 2024

800 ಸಿನಿಮಾ ಟ್ರೇಲರ್ ಲಾಂಚ್‌ಗೆ ತೆಂಡೂಲ್ಕರ್‌ಗೆ ಲಂಕಾ ಆಹ್ವಾನ

ಶ್ರೀಲಂಕಾದ ಮಾಜಿ ಕ್ರಿಕೆಟರ್​ ಮುತ್ತಯ್ಯ ಮುರಳೀಧರನ್​ ಅವರ ಜೀವನದ ಕುರಿತು ಸಿನಿಮಾ ಸಿದ್ಧವಾಗಿದ್ದು, ಈ ಚಿತ್ರಕ್ಕೆ ‘800’ ಎಂದು ಹೆಸರು ಇಡಲಾಗಿದೆ.

ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಮೇಲೆ ಕ್ರಿಕೆಟ್​ ಪ್ರೇಮಿಗಳು ಹಾಗೂ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ‘800’ ಚಿತ್ರದ ಟ್ರೇಲರ್​ ಬಿಡುಗಡೆಗೆ ಸಮಯ ಕೂಡಿ ಬಂದಿದೆ. ವಿಶೇಷ ಏನೆಂದರೆ, ಈ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವುದು ಕ್ರಿಕೆಟ್​ ಲೋಕದ ದಿಗ್ಗಜ ಸಚಿನ್​ ತೆಂಡೂಲ್ಕರ್​.

ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್​ 5ರಂದು ಮುಂಬೈನಲ್ಲಿ ‘800’ ಸಿನಿಮಾ ಟ್ರೇಲರ್​ ಲಾಂಚ್​ ಆಗಲಿದೆ. ಸಚಿನ್​ ತೆಂಡೂಲ್ಕರ್ ಮಾತ್ರವಲ್ಲದೇ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ. ಸದ್ಯ ಮುತ್ತಯ್ಯ ಮುರಳೀಧರನ್​ ಅವರ ಬದುಕಿನ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘800’ ಸಿನಿಮಾ ಮೂಡಿಬಂದಿದ್ದು, ಈ ಸಿನಿಮಾದಲ್ಇ ನಾಯಕ ನಟರಾಗಿ ವಿಜಯ್​ ಸೇತುಪತಿ ನಟಿಸಿದ್ದಾರೆ.

RELATED ARTICLES

Related Articles

TRENDING ARTICLES