Thursday, December 19, 2024

ಕೃಷ್ಣ ಭೈರೇಗೌಡರ ಶ್ವಾನ ಪ್ರೇಮಕ್ಕೆ ಜನರು ಫಿದಾ

ಬೆಂಗಳೂರು : ಕಳೆದ ವಾರ ತಮ್ಮ ಲಗೇಜ್ ತಾವೇ ಹಿಡಿದುಕೊಂಡು ಓಡಾಡಿ ಗಮನ ಸೆಳೆದಿದ್ದ ಸಚಿವ ಕೃಷ್ಣ ಬೈರೇಗೌಡ ಅವರು, ಇದೀಗ ಮತ್ತೊಮ್ಮೆ ತಮ್ಮ ಸರಳತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ತಮ್ಮ ಕೋಲಾರ ಫಾರ್ಮ್ ಹೌಸ್​ನಲ್ಲಿ ಸಮಯ ಕಳೆಯುತ್ತಿರುವ ಅವರು, ನೆಲದ ಮೇಲೆ ಕುಳಿತುಕೊಂಡು ಶ್ವಾನಗಳನ್ನು ಮುದ್ದಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

ಸಚಿವರ ಶ್ವಾನ ಪ್ರೇಮಕ್ಕೆ ನೋಡುಗರು ಫಿಧಾ ಆಗಿದ್ದಾರೆ. ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಅವರ ಸರಳತೆ ಮಾತ್ರ ಇನ್ನೂ ಹಾಗೆಯೇ ಇದೆ. ಈ ಮೂಲಕ ಸಚಿವ ಕೃಷ್ಣ ಭೈರೇಗೌಡ ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಜನರ ಸಮಸ್ಯೆ ಆಲಿಸಿದ ಸಚಿವರು

ಸಬ್ ರಿಜಿಸ್ಟ್ರಾರ್ ಕಚೇರಿಯ ಸೇವಾ ದಕ್ಷತೆ ಹಾಗೂ ಜನರ ಸಮಸ್ಯೆಗಳನ್ನು ತಿಳಿಯುವ ಸಂಬಂಧ ಇಂದು ಕೃಷ್ಣ ಬೈರೇಗೌಡ ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಜನರ ಸಮಸ್ಯೆಯನ್ನು ಆಲಿಸಿದರು. ರಾಜ್ಯಾದ್ಯಂತ ಪ್ರತಿದಿನ 10 ಸಾವಿರಕ್ಕೂ ಅಧಿಕ ನೋಂದಣಿಗಳಾಗುತ್ತಿವೆ. ಕಾವೇರಿ-2 ತಂತ್ರಾಂಶದ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

RELATED ARTICLES

Related Articles

TRENDING ARTICLES