Monday, December 23, 2024

ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನ ; ಐವರ ಬಂಧನ

ಶಿವಮೊಗ್ಗ : ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಐವರು ಆರೋಪಿಗಳನ್ನು ಬಂಧಿಸಿದ ಪೋಲಿಸ್ ಪಡೆ ಘಟನೆ ಭದ್ರಾವತಿಯ ಹಳೆನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭದ್ರಾವತಿಯ ಭದ್ರಾ ರೈಸ್ ಮಿಲ್​ನ ಬಳಿ ಮಹಮ್ಮದ್ ಅಜುರುದ್ಧಿನ್ (24), ಇಲಿಯಾಜ್ ಬೇಗ್ (22), ಸೈನುದ್ದೀನ್ (38), ಸಮೀರ್ ಖಾನ್ ಮತ್ತು ಅರ್ಬಾಜ್ (22) ಬಂಧಿತ ಆರೋಪಿಗಳು. ಎಂಬ ಐವರು ಯುವಕರು ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದರು.

ಇದನ್ನು ಓದಿ : ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ‌ ಶಿಕ್ಷಣದ ಗುರಿ: ಸಿಎಂ

ಅದೇ ರೀತಿ ಇಂದು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದು, ಭದ್ರಾವತಿಯ ಈ ಐವರನ್ನು ಬಂಧಿಸಿದ ಹಳೆನಗರ ಪೋಲಿಸ್ ಠಾಣಾ ಪೋಲಿಸರು. ಸದ್ಯ ಆರೋಪಿಗಳಿಂದ 51 ಸಾವಿರ ರೂ.ಗಳ 1 ಕೆ.ಜಿ 361 ಗ್ರಾಂ ತೂಕದ ಒಣ ಗಾಂಜಾ, ಬೈಕ್ ಮತ್ತು 800 ರೂಪಾಯಿ ವಶಕ್ಕೆ ಪಡೆದ ಪೋಲಿಸರು.

ಈ ಕಾರ್ಯಚರಣೆ ಮೇರೆಗೆ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES