Monday, December 23, 2024

ಉದಯನಿಧಿ ಸ್ಟಾಲಿನ್ ಪೆಂಗ : ನಟ ಪ್ರಥಮ್

ಚಾಮರಾಜನಗರ : ಸನಾತನದ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹಗುರವಾಗಿ ಹೇಳಿಕೆ ಹರಿಬಿಟ್ಟಿರುವುದನ್ನು ನಟ ಪ್ರಥಮ್ ಖಂಡಿಸಿದ್ದಾರೆ.

ಚಾಮರಾಜನಗರದ ಹನೂರಿನಲ್ಲಿ ಮಾತನಾಡಿರುವ ಅರವರು, ಏನು ಹೇಳಿದ್ರು ಸರಿ ಅನ್ನೋ ಮನೋಭಾವ ಒಳ್ಳೆಯದಲ್ಲ. ಉದಯನಿಧಿ ಪೆಂಗನ ತರ ಮಾತನಾಡುವುದನ್ನು ಬಿಡಬೇಕು ಎಂದಿದ್ದಾರೆ.

ಉದಯನಿಧಿ ಸ್ಟಾಲಿನ್ ತಪ್ಪಾಗಿ ಮಾತಾಡಿದ ಬಳಿಕ ಕ್ಷಮೆ ಕೇಳುತ್ತಾರೆ ಅಂದುಕೊಂದ್ದೆ. ಆದರೆ, ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ, ಅಂತವರ ಬಗ್ಗೆ ಮಾತನಾಡೋದೆ ಬಿಡಬೇಕು ಅನಿಸುತ್ತದೆ ಎಂದು ನಟ ಪ್ರಥಮ್ ಹೇಳಿದ್ದಾರೆ.

ಧರ್ಮವನ್ನು ಪೂಜಿಸುವುದು ಬೇಡ

ಉಡಾಫೆ ಹೇಳಿಕೆಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತೆ ಎನ್ನುವ ಪರಿಕಲ್ಪನೆ ಇರಬೇಕು. ಅವರ ಹೇಳಿಕೆಯಿಂದ ಎಷ್ಟೋ ಜನರ ಭಾವನೆಗಳಿಗೆ ನೋವಾಗಿದೆ. ಇಷ್ಟ ಇಲ್ಲದಿದ್ದರೆ ಧರ್ಮವನ್ನು ಪೂಜಿಸುವುದು ಬೇಡ. ಯಾರೇ ಆಗಲಿ ತಮ್ಮ ತಮ್ಮ ಧರ್ಮವನ್ನು ಗೌರವಿಸಬೇಕು. ಆದರೆ, ಈ ರೀತಿ ಮಾತನಾಡುವುದು ತಪ್ಪು ಎಂದು ಬೇಸರಿಸಿದ್ದಾರೆ.

RELATED ARTICLES

Related Articles

TRENDING ARTICLES