Monday, December 23, 2024

ಜಮೀನಿಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ

ರಾಮನಗರ : ಜಮೀನಿಗೆ ಹೋಗಿದ್ದ ಮಹಿಳೆಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶ್ವೇತಾ ಸಿ.ಕೆ (33) ಕೊಲೆಯಾದ ಮಹಿಳೆ. ಎಂಬುವರು ನಿನ್ನೆ ಮಧ್ಯಾಹ್ನ ಜಮೀನಿಗೆ ತೆರಳಿದ್ದರು. ಬಳಿಕ ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಈ ಸಂಬಂಧ ಮಹಿಳೆ ಕುಟುಂಬಸ್ಥರು ಗಾಬರಿಯಾಗಿದ್ದು, ಅಕ್ಕೂರು ಪೋಲಿಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು.

ದುರಾದೃಷ್ಟವಶಾತ್ ಇಂದು ಮುಂಜಾನೆ ಜಮೀನಿನ ಹೋಡಾದಲ್ಲಿ ಶ್ವೇತಾ ಶವವಾಗಿ ಪತ್ತೆಯಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಕ್ಕೂರು ಪೋಲಿಸರು ಭೇಟಿ ನೀಡಿ ಪಡಿಶೀಲನೆ ನಡೆಸಿದರು.

ಇದನ್ನು ಓದಿ : ಡೇ ಬೈ ಡೇ.. ಬಿಜೆಪಿ ಅದೋಗತಿಗೆ ಹೋಗ್ತಿದೆ : ಜಗದೀಶ್ ಶೆಟ್ಟರ್

ಈ ಹಿಂದೆ ಮನೆಯಲ್ಲಿ ಅತ್ತೆ- ಮಾವನ ಜೊತೆ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದ ಶ್ವೇತಾ. ಈ ಹಿನ್ನೆಲೆ ಅತ್ತೆ ಮಾವನಿಂದಲೇ ಕೊಲೆ ಶಂಕೆ ಇರುವ ಕಾರಣ, ಸ್ಥಳಕ್ಕೆ ಎಸ್ಪಿ ಬರುವವರೆಗೂ ಮೃತದೇಹ ಹೊರ ತೆಗೆಯದಂತೆ ಶ್ವೇತಾ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

RELATED ARTICLES

Related Articles

TRENDING ARTICLES