Monday, December 23, 2024

ಹುಲಿ ದಾಳಿಗೆ ಬಾಲಕ ಸಾವು : ಬಾಲಕನ ಕುಟುಂಬಕ್ಕೆ 15 ಲಕ್ಷ ಪರಿಹಾರ

ಮೈಸೂರು: ಜಿಲ್ಲೆಯಲ್ಲಿ ಕಾಡುಪ್ರಾಣಿ ದಾಳಿಯಿಂದ ಸಾವಿಗೀಡಾದ ಬಾಲಕ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ ನೀಡಲಾಗಿದೆ.

ಕೃಷ್ಣಾ ನಾಯಕರ ಪುತ್ರ ಚರಣ್ (7) ಮೃತಪಟ್ಟಿದ್ದ. ಸೋಮವಾರ ಎಚ್.ಡಿ.ಕೋಟೆ ತಾಲ್ಲೂಕಿನ ಕಲ್ಲಹಟ್ಟಿಯಲ್ಲಿ ತಮ್ಮ ಜಮೀನಿನ ಮರದ ಕೆಳಗೆ ಕುಳಿತಿದ್ದ ಬಾಲಕನನ್ನು ಕಾಡುಪ್ರಾಣಿಗಳು ಹಾಡಹಗಲಿನಲ್ಲೇ ದಾಳಿ ನಡೆಸಿ ಎಳೆದುಕೊಂಡು ಹೋಗಿತ್ತು.

ಇದನ್ನೂ ಓದಿ: ವೃದ್ಧನ ಎಳೆದೊಯ್ದ ಹಸು: ವೃದ್ದ ಸಾವು!

ಪೋಷಕರೊಂದಿಗೆ ಜಮೀನಿಗೆ ಆಗಮಿಸಿ ಮರದ‌ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಬಾಲಕ ಚರಣ್, ಕೆಲವೇ ಕ್ಷಣದಲ್ಲಿ ಕಣ್ಮರೆಯಾಗಿದ್ದ ಮಗುಕಾಣದಾದಾಗ ಸುತ್ತಾ ಮುತ್ತ ಪೋಷಕರು ಹುಡುಕಾಟ ನಡೆಸಿದ್ದಾರೆ. ಸ್ವಲ್ಪ ದೂರದಲ್ಲಿ ಬಾಲಕನ ರಕ್ತ ಸಿಕ್ತ ಶವ ಪತ್ತೆಯಾಗಿತ್ತು, ಹುಲಿ ಎಳೆದುಕೊಂಡು ಹೋಗಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್ ಡಿ ಕೋಟೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಬಾಲಕನ ಕುಟುಂಬಕ್ಕೆ ಪರಿಹಾರ ನೀಡಿದ್ದು ಕಾಡುಪ್ರಾಣಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.

ಅಲ್ಲಿಯವರೆಗೂ ಸಂಜೆ ನಂತರ ಯಾರು ಹೊರ ಬರದಂತೆ ಮನವಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮನವಿ.

RELATED ARTICLES

Related Articles

TRENDING ARTICLES