Wednesday, January 22, 2025

ನನ್ನ ರುಂಡ ಸಹ ಕಾಂಗ್ರೆಸ್​ಗೆ ಹೋಗಲ್ಲ : ರಮೇಶ್ ಜಾರಕಿಹೊಳಿ

ಬೆಳಗಾವಿ : ನನ್ನ ರುಂಡ ಸಹ ಕಾಂಗ್ರೆಸ್​ ಪಕ್ಷಕ್ಕೆ ಹೋಗಲ್ಲ. ನಾನು ಇದೇ ಪಕ್ಷದಲ್ಲಿ ರಾಜಕೀಯ ಮಾಡುವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ನಾನು ಪಕ್ಷದ ಪರ‌ ಕೆಲಸ ಮುಂದುವರಿಸುವೆ. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನನ್ನ ವಿರುದ್ಧ ಮಗಳು ನಿಂತರು ಬಿಜೆಪಿ ಪರ‌ ಕೆಲಸ ಮಾಡುವೆ ಎಂದರು.

ಲಕ್ಷ್ಮಣ ಸವದಿಗೆ ಮರಳಿ ಬಿಜೆಪಿ ಕರೆ ತರುವ ವಿಚಾರವಾಗಿ ಮಾತನಾಡಿ, ಅವರು ಸ್ವಯಂ ಘೋಷಿತ ಮಹಾನಾಯಕರು. ನಮಗೆ ಈ ರೀತಿ ಅಸುಹೆ ಮಾಡಿ ಬಿಟ್ಟು ಹೋಗಿದ್ದವರು. ಇಂತವರನ್ನು ನಮ್ಮ ನಾಯಕರು ಮತ್ತೆ ಕರೆ ತಂದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಕುಟುಕಿದರು.

ಮಹಾನಾಯಕನ ಒಂದು ಕುತಂತ್ರ

ಆಪರೇಷನ್ ಮಾಡುವವರು ಮೂರ್ಖರು, ಹೋಗುವವರು ಮೂರ್ಖರೇ. ನಾವು ಹೋಗಿದ್ದು ಸಂದರ್ಭ ಬೇರೆ ಇತ್ತು. ಅವಾಗ ಎಲ್ಲರೂ ಕೂಡಿ ಸರ್ಕಾರ ರಚನೆ ಮಾಡಿದ್ವಿ. ನಮ್ಮ ವಯಕ್ತಿಕ ನಿರ್ಧಾರದಿಂದ ಬಿಜೆಪಿ ಸೇರಿದೆವು. ಆದರೆ, ಈಗ ನಡೆಯುತ್ತಿರುವುದು ಆಪರೇಷನ್ ಹಸ್ತ ಅಲ್ಲ, ಮಹಾನಾಯಕನ ಒಂದು ಕುತಂತ್ರ ಎಂದು ಡಿಕೆಶಿ ಹೆಸರೇಳದೆ ವಾಗ್ದಾಳಿ ನಡೆಸಿದರು.

ಶಾಸಕರ ಹೆಸರು ನನಗೆ ಗೊತ್ತು

ಕಾಂಗ್ರೆಸ್ ಪಕ್ಷದ 25ರಿಂದ 30 ಶಾಸಕರು ಬೆಂಗಳೂರಿನ ಒಂದು ಖಾಸಗಿ ಹೊಟೆಲ್ ನಲ್ಲಿ ಸಭೆ ನಡೆಸುವವರಿದ್ದರು. ಆ ಎಲ್ಲಾ ಶಾಸಕರ ಹೆಸರು ಸಹ ನನಗೆ ಗೊತ್ತು. ಅವರು ಸಭೆ ನಡೆಸಬಾರದೆಂದು ಆ ಮಹಾನಾಯಕ ಆಪರೇಷನ್ ಹಸ್ತ ಅಂತ ಅವರಿಗೆ ಹೆದರಿಸುವ ಸಲುವಾಗಿ ಮಾಡಿದ ಕುತಂತ್ರ ಇದು ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES