Friday, December 27, 2024

ಸೋಮೇಶ್ವರ ರುದ್ರಪಾದೆಯಿಂದ ಬಿದ್ದು ವೈದ್ಯ ಸಾವು

ಮಂಗಳೂರು : ಸೋಮೇಶ್ವರ ರುದ್ರಪಾದೆಯಿಂದ ಕಾಲುಜಾರಿ ಬಿದ್ದು ವೈದ್ಯ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊರವಲಯದ ಉಳ್ಳಾಲ ಸೋಮೇಶ್ವರ ಬೀಚ್​ನಲ್ಲಿ ನಡೆದಿದೆ.

ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಡಾ. ಆಶಿಕ್ ಗೌಡ (30) ಮೃತ ವ್ಯಕ್ತಿ. ಎಂಬುವವರು ಕೆಲಸ ನಿರ್ವಹಿಸುತ್ತಿದ್ದರು. ಆಸ್ಪತ್ರೆಯಲ್ಲಿ ಇಂಟರ್ನ್​ಶಿಪ್​ನಲ್ಲಿದ್ದ, ಮೂವರು ಯುವತಿಯರು ಹಾಗೂ ಇನ್ನಿಬ್ಬರು ಗೆಳೆಯರ ಜೊತೆಯಲ್ಲಿ ನಿನ್ನೆ ರಾತ್ರಿ ಸೋಮೇಶ್ವರಕ್ಕೆ  ತೆರಳಿದ್ದ ಆಶಿಕ್ ಗೌಡ.

ಇದನ್ನು ಓದಿ : ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದ ದಸರಾ ವೈಭವ

ಈ ವೇಳೆ ಸೋಮೇಶ್ವರ ರುದ್ರಪಾದೆಯಲ್ಲಿರುವ ಸಮುದ್ರವನ್ನು ನೋಡಲೆಂದು ಹೋಗಿದ್ದಾಗ, ದುರಾದೃಷ್ಟವಶಾತ್ ಆಯತಪ್ಪಿ ನೀರಿಗೆ ಬಿದ್ದ ವ್ಯಕ್ತಿ. ಬಳಿಕ ಗಾಬರಿಗೊಂಡ ಸ್ನೇಹಿತರು ತಕ್ಷಣ ಪೋಲಿಸರಿಗೆ ವಿಚಾರ ತಿಳಿಸಿದ್ದು, ಘಟನಾ ಸ್ಥಳಕ್ಕೆ ಬಂದು ರಾತ್ರಿಯೇ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿಗಳು.

ಆದರೆ ಇಂದು ಬೆಳಗ್ಗೆ ಮೃತ ವ್ಯಕ್ತಿ ಶವ ಪತ್ತೆಯಾಗಿದ್ದು, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES