Monday, December 23, 2024

ನೇಪಾಳ ಆಲೌಟ್ : ಭಾರತಕ್ಕೆ 231 ರನ್ ಟಾರ್ಗೆಟ್

ಬೆಂಗಳೂರು : ಟೀಂ ಇಂಡಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ನೇಪಾಳ ತಂಡ 231 ರನ್​ ಸಾಧಾರಣ ಟಾರ್ಗೆಟ್ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ 48.2 ಓವರ್​ಗಳಲ್ಲಿ ಸರ್ಪಪತನ ಕಂಡು ಕೇವಲ 230 ರನ್​ ಗಳಿಸಿತು.

ಟೀಂ ಇಂಡಿಯಾ ಬೌಲಿಂಗ್ ದಾಳಿ ನಡುವೆ ನೇಪಾಳ ಬ್ಯಾಟರ್​ಗಳು ದಿಟ್ಟ ಹೋರಾಟ ನೀಡಿದರು. ಆರಂಭದಲ್ಲೇ ಭಾರತ ಮೂರು ಕ್ಯಾಚ್ ಕೈಚೆಲ್ಲಿತು. ಇದರಿಂದ ನೇಪಾಳ 200ರ ಗಡಿ ದಾಟಿತು. ಬಳಿಕ, ಭಾರತ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮೂಲಕ ನೇಪಾಳ 230 ರನ್‌ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.

ನೇಪಾಳ ಪರ ಕುಶಾಲ್ ಭರ್ಟೆಲ್ 38, ಆಸೀಫ್ ಶೇಕ್ 58 ರನ್ ಸಿಡಿಸಿದರು. ಗುಲ್ಶನ್ ಜಾ 23, ದೀಪೇಂದ್ರ ಸಿಂಗ್ 29, ಸೋಂಪಾಲ್ ಕಮಿ 48, ಭೀಮ್ ಶರ್ಕಿ 7, ನಾಯಕ ರೋಹಿತ್ ಪೌದೆಲ್ 5, ಕುಶಾಲ್ ಮಲ್ಲಾ 2 ರನ್ ಗಳಿಸಿದರು.

ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 3 ಹಾಗೂ ಮೊಹಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದರು. ಮೊಹಮದ್ ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದುಲ್ ತಲಾ 1 ವಿಕೆಟ್ ಪಡೆದರು.ಶ್ರೀಲಂಕಾದ ಪಲ್ಲೆಕಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಭಾರತ ಸೂಪರ್ 4 ಹಂತಕ್ಕೆ ಅವಕಾಶ ಪಡೆಯಬೇಕಾದರೆ ಇಂದಿನ ಪಂದ್ಯದಲ್ಲಿ ನೇಪಾಳವನ್ನು ಮಣಿಸಲೇಬೇಕು.

RELATED ARTICLES

Related Articles

TRENDING ARTICLES