Monday, January 20, 2025

ಸೆ.7ಕ್ಕೆ OTTಯಲ್ಲಿ ‘ಜೈಲರ್​​​’ ರಿಲೀಸ್​

ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲ‌ರ್​​’ ಚಿತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಇದನ್ನೂ ಓದಿ: ಪೊಲೀಸ್ ಮನೆಯಲ್ಲೇ ಒಡವೆ, ಹಣ ದೋಚಿದ ಕಳ್ಳರು!

ಸೆಪ್ಟೆಂಬರ್ 7ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಚಿತ್ರಮಂದಿರಗಳಲ್ಲಿಯೂ ಅಗಸ್ಟ್ 11ರಂದು ‘ಜೈಲರ್‌’ ಚಿತ್ರ ಬಿಡುಗಡೆಗೊಂಡಿತ್ತು. 2 ವರ್ಷದ ನಂತರ ರಜನಿ ಮಾಸ್ ಚಿತ್ರದ ಮೂಲಕ ಬೆಳ್ಳಿತರ ಮೇಲೆ ಕಾಣಿಸಿದ್ದರು.

ಜೈಲರ್ ಚಿತ್ರ ಒಂದು ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ತನ್ನ ಮಗನ ಕೊಲೆ ಮಾಡಿದವರನ್ನು ಹುಡುಕುತ್ತಾ ಹೋಗುವ ನಿವೃತ್ತ ಜೈಲರ್ ಟೈಗರ್ ಮುಡುವೇಲ್ ಪಾಂಡಿಯನ್ ಮೇಲೆ ಕಥೆ ಕೇಂದ್ರಿತವಾಗಿದೆ. ನರಸಿಂಹನ ಪಾತ್ರದಲ್ಲಿ ನಟ ಶಿವರಾಜ್‌ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ. ಮಲಯಾಳಂ ನಟ ಮೋಹಲ್ ಲಾಲ್ ನಟನೆಯೂ ಗಮನಾರ್ಹವಾಗಿದೆ.

RELATED ARTICLES

Related Articles

TRENDING ARTICLES