ಬೆಂಗಳೂರು : 10 ವರ್ಷದಲ್ಲಿ ಸಾಲ ಎಷ್ಟಾಗಿದೆ ಚರ್ಚೆಗೆ ಬರ್ತಾರಾ? ಉದ್ಯೋಗ ಎಷ್ಟು ಸೃಷ್ಟಿ ಮಾಡಿದ್ದಾರೆ ಚರ್ಚೆಗೆ ಬರ್ತಾರಾ? ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.
ಗ್ಯಾರಂಟಿಗಳಿಂದ ಆರ್ಥಿಕತೆ ದಿವಾಳಿಯಾಗುತ್ತೆ ಎಂಬ ಪ್ರಧಾನಿ ಮೋದಿ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಡತನ ರೇಖೆಯಿಂದ ಎಷ್ಟು ಜನ ವಾಪಸ್ಸು ಹೋಗಿದ್ದಾರೆ ಚರ್ಚೆ ಮಾಡ್ತಾರಾ? ಎಂದು ಗುಡುಗಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ ಮೇಲೆ ಪ್ರಧಾನಿಗಳಿಗೆ ಸಡನ್ ಆಗಿ ಆರ್ಥಿಕತೆ ಬಗ್ಗೆ ಚಿಂತನೆ ಶುರುವಾಗಿದೆ. ಕಳೆದ ಒಂಬತ್ತು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ?ಬರೀ ಮನ್ ಕೀ ಬಾತ್ ಅಂತಾರೆ. ಒಂದು ಪ್ರೆಸ್ ಕಾನ್ಫರೆನ್ಸ್ ಕರೆದು ದೇಶದ ಆರ್ಥಿಕ ಬಗ್ಗೆ ಮಾತಾಡಲಿ ಎಂದು ಕುಟುಕಿದ್ದಾರೆ.
ಬಿಜೆಪಿಯವರಿಗೆ ಚಾಲೆಂಜ್ ಮಾಡ್ತೀನಿ
ನಾನು ಬಿಜೆಪಿಯವರಿಗೆ ಚಾಲೆಂಜ್ ಮಾಡ್ತೀನಿ. ಶ್ವೇತ ಪತ್ರ ಹೊರಡಿಸಲಿ ಕಳೆದ ೧೦ ವರ್ಷಗಳಿಂದ ಏನಾಗಿದೆ ಅಂತ. ನಾವು ಇವರಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಕರ್ನಾಟಕ ಆರ್ಥಿಕವಾಗಿ ಸುಭದ್ರವಾಗಿದೆ. ನಮ್ಮ ನೀತಿಗಳಿಂದ ಪ್ರಗತಿ ಪರ ರಾಜ್ಯ ಅಂತ ಹೇಳಿಸಿಕೊಂಡಿದ್ದೇವೆ. ಯುಪಿ, ಮಧ್ಯಪ್ರದೇಶದಿಂದ ಉದ್ಯೋಗಕ್ಕೆ ಇಲ್ಲಿಗೆ ತಾನೆ ಬರ್ತಾರೆ. ಕರ್ನಾಟಕದಿಂದ ಬಿಹಾರ್, ಯುಪಿಗೆ ಹೋಗ್ತಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.