ಹಾಸನ : ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರದ ಕುರಿತು I.N.D.I.A ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ತಾಲ್ಲೂಕಿನ ಬೈಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವ್ರು ದಿನಕ್ಕೊಂದು ಹೇಳಿಕೆಗಳನ್ನು ಕೊಡ್ತಾರೆ ಎಂದು ಕುಟುಕಿದ್ದಾರೆ.
ಬಾಂಬೆ ಒಳಗೆ 28 ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಯಿತು. ಸೆಪ್ಟಂಬರ್ 30ರೊಳಗೆ ಎಲ್ಲಾ ಸೀಟ್ ನಿಗದಿ ಮಾಡ್ತಿವಿ ಅಂತ ಹೇಳಿದ್ರು, ಏನಾಯ್ತು? ಒಂದು ಕಮಿಟಿ ಮಾಡಿದ್ದಾರೆ, ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ? ಅಥವಾ ಆ ಒಕ್ಕೂಟದ ಸಂಚಾಲಕರು ಯಾರು ಅಂತ ಹೇಳಿದ್ದಾರಾ? ಎಂದು ಗುಡುಗಿದ್ದಾರೆ.
ನೋಡೋಣ ಬನ್ನಿ.. ನಾನು ಬದುಕಿದ್ದೀನಿ
ಒಂದು ಕಮಿಟಿ ಮಾಡಿದ್ದಾರೆ, ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. ಎರಡು ದಿನ ಬಾಂಬೆ ಮೀಟಿಂಗ್ ನಡಿತು. ಇನ್ನೂ ಲೋಕಸಭಾ ಚುನಾವಣೆ ಏಳು-ಎಂಟು ತಿಂಗಳು ಇದೆ. ನೋಡೋಣ ಬನ್ನಿ.. ನಾನು ಬದುಕಿದ್ದೀನಿ ಎಂದು ದೇವೇಗೌಡ್ರು ಅಸಮಾಧಾನ ಹೊರ ಹಾಕಿದರು.