ಮಂಡ್ಯ : ರೈತನೊರ್ವನ ಮನೆಯ ಬೀಗ ಮುರಿದು ಮೇಕೆಗಳನ್ನು ಹೊತ್ತೊಯ್ದ ಕಿಡಿಗೇಡಿಗಳು ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಪಿ.ಡಿ.ಜಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನಿನ್ನೆ ಗ್ರಾಮಕ್ಕೆ ಬಂದಿದ್ದ ಕದೀಮರ ಗುಂಪುವೊಂದು ರೈತ ಲೋಕೇಶ್ ಎಂಬುವವರ ಮನೆಗೆ ನುಗ್ಗಿದ್ದರು. ಗ್ರಾಮದಲ್ಲಿ ಎಲ್ಲರೂ ಮಲಗಿದ್ದ ವೇಳೆ ರೈತನ ಮನೆಯ ಬೀಗ ಮುರಿದು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 5 ಆಡುಗಳನ್ನು (ಮೇಕೆ) ಹೊತ್ತೊಯ್ದಿದ್ದಾರೆ.
ಇದನ್ನು ಓದಿ : ಪಾಣರ ಸಮುದಾಯದಲ್ಲಿ ಹುಟ್ಟುತ್ತೇನೆ : ರಿಷಬ್ ಶೆಟ್ಟಿ
ಅಷ್ಟೇ ಅಲ್ಲದೆ ಕಳ್ಳತನದ ವೇಳೆ ಮನೆಯವರು ಎಚ್ಚರಗೊಳ್ಳಬಹುದು ಎಂಬ ಆಲೋಚನೆಯಿಂದ ಕೊಟ್ಟಿಗೆಯ ಸಮೀಪದ ಮೂರು ಮನೆಗಳ ಹೊರ ಭಾಗದಿಂದ ಬಾಗಿಲುಹಾಕಿ ಕಳ್ಳತನ ಮಾಡಿದ್ದಾರೆ. ಈ ಘಟನೆಯಿಂದ ರೈತನಿಗೆ ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿ ಹೋಗಿದೆ.
ತುಂಬಾ ಪ್ರೀತಿಯಿಂದ ಸಾಕಿದ್ದ ಆಡುಗಳನ್ನು ಕಳೆದುಕೊಂಡು ರೈತನ ಆಕ್ರಂದನ ಮುಗಿಲು ಮುಟ್ಟಿದೆ.