Sunday, January 19, 2025

ಸಿದ್ದರಾಮಯ್ಯ ‘ಭ್ರಷ್ಟಾತಿ ಭ್ರಷ್ಟರ ರಕ್ಷಕ’ : ಬಿಜೆಪಿ ವ್ಯಂಗ್ಯ

ಬೆಂಗಳೂರು : ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಯನ್ನು ಕ್ರಿಯಾತ್ಮಕತೆಗೆ ಹೋಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಲೋಕಾಯುಕ್ತಕ್ಕೆ‌‌ ಕೊಳ್ಳಿ ಇಟ್ಟಿದ್ದ ಭ್ರಷ್ಟಾತಿ ಭ್ರಷ್ಟರ ರಕ್ಷಕ ಸಿದ್ದರಾಮಯ್ಯ. ಅವರ ಬಾಯಲ್ಲಿ ಭ್ರಷ್ಟ ಎನ್ನುವ ಪದ, ಭೂತದ ಬಾಯಲ್ಲಿ ಭಗವದ್ಗೀತೆ ಹಾಡಿಸಿದಂತಿದೆ ಎಂದು ಕುಟುಕಿದೆ.

ರಾಹುಲ್ ಗಾಂಧಿ ಅವರ ಚಿಂತನೆಯನ್ನು ಕ್ರಿಯಾತ್ಮಕತೆಗೆ ಹೋಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅವರೊಬ್ಬ ವಿದೇಶಿ ಕೈಗೊಂಬೆಯಾಗಿ ದೇಶದೊಳಗೆ ಬೆಂಕಿ ಹಚ್ಚುವ ದುರ್ಚಿಂತನೆ ತಿಳಿದಂತೆ ಕಾಣುತ್ತಿಲ್ಲ ಎಂದು ಛೇಡಿಸಿದೆ.

ನಿದ್ದೆಗೆ ಜಾರಬೇಡಿ, ಎಚ್ಚರವಾಗಿರಿ!

ದೇಶದ ಏಳಿಗೆಗೆ, ಉದ್ಯೋಗ ಸೃಷ್ಟಿಗೆ ಉದ್ಯಮಗಳ ಕೊಡುಗೆ ಅಪಾರ. ಆದರೆ, ಸಿದ್ದರಾಮಯ್ಯರವರಂತಹ ಪಕ್ಷಪಾತಿ ಮಾನಸೀಕತೆಯವರು ನಿರಾಧಾರ ಆರೋಪಗಳನ್ನು ಮಾಡುವುದಲ್ಲದೇ ಬೇರೇನು ಮಾಡಲು ಸಾಧ್ಯ? ಎಟಿಎಂ ಸರ್ಕಾರದ ಭ್ರಷ್ಟಾಚಾರಗಳ ಹಳವಂಡಗಳು ಜನರಿಗೆ ತಿಳಿದಿಲ್ಲವೆಂದು ನಿದ್ದೆಗೆ ಜಾರಬೇಡಿ, ಎಚ್ಚರವಾಗಿರಿ ಎಂದು ಕಾಲೆಳೆದಿದೆ.

 

RELATED ARTICLES

Related Articles

TRENDING ARTICLES