Monday, December 23, 2024

ಗಂಡಸರೇ ಮುಟ್ಟಬೇಡಿ, ನಾನು ಪವಿತ್ರಳಾಗಿದ್ದೇನೆ : ರಾಖಿ ಸಾವಂತ್

ಬೆಂಗಳೂರು : ನಟಿ ರಾಖಿ ಸಾವಂತ್​ ಅವರು ಪ್ರತಿ ದಿನವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಪತಿ ಆದಿಲ್​ ಖಾನ್​ ದುರಾನಿ ಜೊತೆ ಅವರು ಕಿರಿಕ್​ ಮಾಡಿಕೊಂಡು ಹಲವು ತಿಂಗಳುಗಳು ಕಳೆದಿವೆ. ಆ ನೋವಲ್ಲೇ ಅವರು ಕಣ್ಣೀರು ಹಾಕುತ್ತಾ ಮೆಕ್ಕಾ-ಮದೀನಾಗೆ ಭೇಟಿ ನೀಡಿ ಬಂದಿದ್ದಾರೆ.

ಯಾತ್ರೆ ಮುಗಿಸಿ ಬಂದ ಬಳಿಕ ಅವರ ಮಾತಿನ ಧಾಟಿ ಬದಲಾಗಿದೆ. ವೇಷ-ಭೂಷಣ ಕೂಡ ಬದಲಾಗಿ ಹೋಗಿದೆ. ರಾಖಿ ಸಾವಂತ್​ ಈಗ ಮೈ ತುಂಬಾ ಬಟ್ಟೆ ಧರಿಸುತ್ತಿದ್ದಾರೆ. ‘ಗಂಡಸರು ಹತ್ತಿರಕ್ಕೆ ಬಂದರೆ ಹುಷಾರ್’ ಎಂದು ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಆ ರೀತಿ ಅವರು ಕೂಗಾಡಿದ ವಿಡಿಯೋ ವೈರಲ್​ ಆಗಿದೆ.

ರಾಖಿ ಸಾವಂತ್​ ಎಲ್ಲಿಯೇ ಹೋದರೂ ಅಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ವಿಡಿಯೋ ಹಾಗೂ ಫೋಟೋಗೋಸ್ಕರ ನೂಕುನುಗ್ಗಲು ಮಾಡಲಾಗುತ್ತದೆ. ಅದನ್ನು ರಾಖಿ ಸಾವಂತ್​ ಎಂಜಾಯ್​ ಮಾಡುತ್ತಾರೆ ಕೂಡ. ಆದರೆ, ಇತ್ತೀಚೆಗೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ. ತಮ್ಮ ಫೋಟೋ ಕ್ಲಿಕ್ಕಿಸಲು ಬಂದ ಪುರುಷ ಅಭಿಮಾನಿಗಳನ್ನು ಕಂಡು ರಾಖಿ ಸಾವಂತ್​ ಕೂಗಾಡಿದ್ದಾರೆ. ಮೆಕ್ಕಾ ಮದೀನಾಗೆ ಹೋಗಿ ಬಂದ ಬಳಿಕ ಅವರಲ್ಲಿ ಆಗಿರುವ ಈ ಬದಲಾವಣೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

RELATED ARTICLES

Related Articles

TRENDING ARTICLES