ಚಿಕ್ಕಮಂಗಳೂರು : ಕಾಡು ದಾರಿಯಲ್ಲಿ ಓರ್ವ ವ್ಯಕ್ತಿ ಹೋಗುತ್ತಿರುವ ವೇಳೆ ಕಾಡಾನೆಯೊಂದು ದಾಳಿಯಿಂದ ಸಾವನ್ನಪ್ಪಿರುವ ಘಟನೆ ಅರೆನೂರು ಮತ್ತು ಕಂಚುಕಲ್ ದುರ್ಗಾ ರಸ್ತೆಯಲ್ಲಿ ನಡೆದಿದೆ.
ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ದಾಳಿಯಿಂದ ಮೂಡಿಗೆರೆಯಲ್ಲಿ 2 ವರ್ಷದಲ್ಲಿ 6ಕ್ಕೂ ಹೆಚ್ಚು ಜನ ಆನೆ ದಾಳಿಗೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ದುರ್ಗಾ ಗ್ರಾಮದ ಕಿನ್ನಿ (60) ಮೃತ ವ್ಯಕ್ತಿ. ಎಂಬ ವ್ಯಕ್ತಿಯೊಬ್ಬ ಹಳ್ಳಿಯ ಕಾಲು ದಾರಿಯಲ್ಲಿ ನಡೆದು ಹೋಗುವಾಗ ಏಕಾಏಕಿ ಬಂದ ಕಾಡಾನೆಯೊಂದು ಕಿನ್ನಿ ವ್ಯಕ್ತಿಯ ಮೇಲೆ ದಾಳಿ ಮಾಡಿದೆ.
ದಾಳಿ ಮಾಡಿದ್ದು ಕಾಡಾನೆಯ ಕಾಲ್ತುಳಿತಕ್ಕೆ ಕಿನ್ನಿ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇದನ್ನು ಓದಿ : ಪಾಕಿಸ್ತಾನಕ್ಕೆ ಹೋಗಿ.. ಇದು ನಿಮ್ಮ ದೇಶವಲ್ಲ : ಉರ್ದು ವಿದ್ಯಾರ್ಥಿಗಳಿಗೆ ಗದರಿದ ಶಿಕ್ಷಕಿ
ಬಳಿಕ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಹಿನ್ನೆಲೆ ಕಾಡಾನೆಗಳನ್ನು ನಿಯಂತ್ರಿಸಲು ಸ್ಥಳದಲ್ಲಿ ಪಟಾಕಿ ಸಿಡಿಸುತ್ತಾ, ಸ್ಥಳೀಯರ ಭೇಟಿ ನೀಡ್ತಿರೋದ್ರಿಂದ ಮುನ್ನಚ್ಚೇರಿಕೆ ಕ್ರಮವಹಿಸುತ್ತಿರುವ ಅರಣ್ಯ ಅಧಿಕಾರಿಗಳು.