ಚಿಕ್ಕಮಂಗಳೂರು : ಮೈಸೂರು ರಾಜಮನೆತನದ ಒಡೆಯರ ಮೊಮ್ಮಗಳ ಪ್ರೀತಿಗೆ ಸಾಕು ರೋಹಿತ್ ಆನೆಯೊಂದು ಫಿದಾ ಆಗಿದೆ.
ಈ ಹಿಂದೆ ಆರು ತಿಂಗಳ ಆನೆಮರಿಯೊಂದು ಅನಾಥವಾಗಿರುವುದನ್ನು ಕಂಡು ಜಯಚಾಮರಾಜೇಂದ್ರ ಒಡೆಯರ ಮೊಮ್ಮಗಳಾದ ಶ್ರುತಿ ಅವರು ಅದನ್ನು ತೆಗೆದುಕೊಂಡು ಬಂದು ಬಂಡಿಪುರದ ತಮ್ಮ ರೆಸಾರ್ಟ್ನಲ್ಲಿ ಸಾಕಿದ್ದರು. ಅಷ್ಟೇ ಅಲ್ಲದೆ ಅದಕ್ಕೆ ಪ್ರೀತಿಯಿಂದ ರೋಹಿತ್ ಎಂಬ ಹೆಸರನ್ನು ಕೂಡ ಇಟ್ಟಿದ್ದರು.
ಇದನ್ನು ಓದಿ : ರಂಗನಾಥಸ್ವಾಮಿ ವಿಶೇಷ ಪೂಜೆ; H.D ದೇವೇಗೌಡ್ರು ಕುಟುಂಬ ಭಾಗಿ
ಬಳಿಕ ಅದಕ್ಕೆ 14 ವರ್ಷ ತುಂಬಿದ ಹಿನ್ನೆಲೆ ಬಂಡಿಪುರದ ಆನೆ ಕ್ಯಾಂಪ್ಗೆ ಹಸ್ತಾಂತರ ಮಾಡಿದ್ದ ವಿಶಾಲಾಕ್ಷಿದೇವಿ ಅವರ ಮಗಳು ಶ್ರುತಿ ಕೀರ್ತಿ ದೇವಿ. ಆ ಆನೆ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದ, ಶ್ರುತಿಯವರು ಪ್ರತಿ ತಿಂಗಳಿಗೊಮ್ಮೆ ಆನೆ ಕ್ಯಾಂಪ್ಗೆ ಬಂದು ರೋಹಿತ್ನ ಯೋಗ ಕ್ಷೇಮ ವಿಚಾರಿಸುತ್ತಿದ್ದರು.
ದಸರಾ ಜಂಬೂ ಸವಾರಿಗೆ ಆಯ್ಕೆಯಾಗಿರುವ ರೋಹಿತ್
ಈ ಭಾರಿ ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಗೆ ರೋಹಿತ್ ಆಯ್ಕೆಯಾಗಿದ್ದು, ಈ ಹಿನ್ನೆಲೆ ತುಂಬಾ ಸಂತೋಷ ವ್ಯಕ್ತಪಡಿಸುತ್ತಿರುವ ಒಡೆಯರ್ ಪುತ್ರಿ. ಅಷ್ಟೇ ಅಲ್ಲ ರೋಹಿತ್ ಆರು ತಿಂಗಳ ಕೂಸು ಇದ್ದಾಗ, ನಮ್ಮ ತಾಯಿ ಬಹಳ ಪ್ರೀತಿಯಿಂದ ಸಾಕಿದ್ದರು. ಅವನನ್ನ ಕಂಡರೆ ಇಂದಿಗೂ ಅಷ್ಟೇ ಪ್ರೀತಿ ಇದೆ. ಶ್ರುತಿ ಅವರು ಅಷ್ಟೇ ಅಲ್ಲ ರೋಹಿತ್ ಕೂಡ ಅವರನ್ನ ನೋಡಿದ ಕೂಡಲೆ ಹುಡುಕಿಕೊಂಡು ಓಡೋಡಿ ಬರುತ್ತಾನೆ. ಅವನು ಜಂಬೂ ಸವಾರಿಗೆ ಆಯ್ಕೆಯಾಗಿರುವುದು ತುಂಬಾ ಖುಷಿಯ ವಿಚಾರ ಎಂದರು.
ರೋಹಿತ್ ಒಡೆಯರ ಮನೆಯಲ್ಲಿ ಒಬ್ಬ ಮಗನ ತರ ಆಗಿದ್ದು, ಪ್ರತಿ ತಿಂಗಳು ರಾಮಾಪುರ ಕ್ಯಾಂಪ್ಗೆ ಬಂದು ಆನೆ ಜೊತೆಗೆ ಕಾಲಕಳೆಯುವ ಶ್ರುತಿ ಕೀರ್ತಿ ದೇವಿ.