ಬೆಂಗಳೂರು : ನಾನು ಬೆಳಗ್ಗೆ ಬಂದಿದ್ರೆ ಶಾಶ್ವತವಾಗಿ ಬೆಡ್ ಮೇಲೆ ಇರಬೇಕಾದ ಪರಿಸ್ಥಿತಿ ಬರುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಅವರು, ನಾನು ಉಳಿದಿದ್ದರೇ ಒಂದು ಭಗವಂತ, ಮತ್ತೊಂದು ವೈದ್ಯ ಕಾರಣರು. ನಾನು ಬೆಳಗ್ಗೆ ಹೋಗಿದ್ರೆ ಆಯ್ತು ಅಂತ ಅಂದುಕೊಂಡರೇ ನಾನಿವತ್ತು ಸರಾಗವಾಗಿ ಮಾತಾಡಲು ಆಗುತ್ತಿರಲಿಲ್ಲ. ಇಂತಹ ಪರಿಸ್ಥಿತಿ ಬಂದಾಗ ಯಾರು ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು.
ಎರಡನೇ ಬಾರಿಗೆ ಪಾರ್ಶ್ವವಾಯು ಆಗಿದೆ. ಆಗ ನನ್ನ ಎಡಭಾಗ ಸ್ವಾಧೀನ ಕಳೆದುಕೊಂಡಿತ್ತು. ವೈದ್ಯರು ಬಂದು ಚಿಕಿತ್ಸೆ ನೀಡಿದಾಗ ಸರಿಯಾಗಿದೆ. ಈ ಬಾರಿ ಹೆಚ್ಚಾಗಿ ಡ್ಯಾಮೇಜ್ ಆಗಿತ್ತು. ನಾಡಿನ ಪ್ರತಿ ಕುಟುಂಬವೂ ಪಾರ್ಶ್ವವಾಯು ಆದಾಗ ಟೈಮ್ ವೇಸ್ಟ್ ಮಾಡಬೇಡಿ. ಎಲ್ಲಾ ಸೌಕರ್ಯ ಎಲ್ಲಿ ದೊರುಕುತ್ತೆ ಅದನ್ನು ನೋಡಿ. ನಾಲ್ಕು ಗಂಟೆ ಸಮಯವನ್ನು ಹಾಳುಮಾಡಬೇಡಿ ಎಂದು ತಿಳಿಸಿದರು.
ಜೀವನ ಶೈಲಿ ಬದಲಾಯಿಸಿಕೊಳ್ಳಿ
ನನಗೆ ಇಂಜೆಕ್ಷನ್ ಕೊಟ್ಟು ಮೆದುಳಿನ ಮೇಲೆ ಆದ ಡ್ಯಾಮೆಜ್ ಆಗಿತ್ತು. ಅದನ್ನು ಸರಿ ಮಾಡಲು ಹಣ ಖರ್ಚು ಆಗೇ ಆಗುತ್ತೆ. ಹೀಗಾ,ಗಿ ನಾಡಿನ ಪ್ರತಿ ಕುಟುಂಬವೂ ಆತಂಕಕ್ಕೆ ಒಳಗಾಗಿತ್ತು. ಹಲವು ವ್ಯಕ್ತಿಗಳ ಪ್ರಾರ್ಥನೆ, ಹಾರೈಕೆ ಮಾಡಿದ್ದಾರೆ. ನನ್ನ ಬಳಕೆ ಮಾಡುವಾಗ ಸ್ವಲ್ಪ ಯೋಚನೆ ಮಾಡಿ. ಜೀವದ ಜೊತೆ ಚೆಲ್ಲಾಟವಾಡಬೇಡಿ ಅಂತ ವೈದ್ಯರು ಹೇಳಿದ್ದಾರೆ. ಜೀವನ ಶೈಲಿ ಬದಲಾಯಿಸಿಕೊಳ್ಳಿ ಅಂತ ಹೇಳಿದ್ದಾರೆ. ಕಾರ್ಯಕರ್ತರು, ಜನತೆ ನನ್ನ ಬದುಕಿನ ಬಗೆಗೂ ನೋಡಿ ಎಂದು ಮನವಿ ಮಾಡಿದರು.
ಭಾವುಕರಾದ ಕುಮಾರಸ್ವಾಮಿ
ಕಳೆದ 5 ದಿನದಿಂದ ಸ್ನೇಹಿತರಲ್ಲಿ ಅನುಕಂಪ ,ಭಯದ ವಾತಾವರಣ ಇತ್ತು. ನನ್ನ ಹಿತೈಶಿಗಳಿಗೆ ನನ್ನ ಆರೋಗ್ಯದ ಮಾಹಿತಿ ನೀಡಲು ಮಾಧ್ಯಮದವರು ಶ್ರಮ ಹಾಕಿದ್ದಾರೆ. ಕೆಲವು ದಿನ ವಿಶ್ರಾಂತಿಯಲ್ಲಿರುತ್ತೇನೆ. ಎಲ್ಲರೂ ಸಹಕರಿಸಿ ಎಂದು ಕುಮಾರಸ್ವಾಮಿ ಅವರು ಭಾವುಕರಾದರು.