Wednesday, January 22, 2025

ಬಿರಿಯಾನಿಗಾಗಿ ರಣಾಂಗಣವಾದ ಊಟದ ಹಾಲ್!

ಬೆಂಗಳೂರು : ಪಾಕಿಸ್ತಾನದ ಮದುವೆ ಸಮಾರಂಭದ ಊಟದ ವೇಳೆ ವ್ಯಕ್ತಿಯೊಬ್ಬ ಅತಿಥಿಯೊಬ್ಬನ ಟೊಪ್ಪಿಯನ್ನು ಉದುರಿಸಿದ ಪರಿಣಾಮ ಮಾರಾಮಾರಿ ನಡೆದಿದೆ.

6 ನಿಮಿಷಗಳ  ಈ ವಿಡಿಯೋದಲ್ಲಿ, ಮದುವೆಗೆ ಆಗಮಿಸಿದ್ದ ಜನರು ತಮ್ಮ, ತಮ್ಮ ಟೇಬಲ್​​​ಗಳಲ್ಲಿ ಕುಳಿತು ಊಟ ಮಾಡುತ್ತಿದ್ದರು. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿ, ಬಿಳಿ ಬಟ್ಟೆಯಿಂದ ಪರದೆ ಕಟ್ಟಲಾಗಿತ್ತು.

ಈ ಸಂದರ್ಭದಲ್ಲಿ ಊಟದ ಟೇಬಲ್ ಬಳಿ ಬಂದ ವ್ಯಕ್ತಿಯೊಬ್ಬ ಅತಿಥಿಯೊಬ್ಬರ ಟೊಪ್ಪಿಯನ್ನು ಏಕಾಏಕಿ ಉದುರಿಸಿಬಿಟ್ಟಿದ್ದ. ಆ ವೇಳೆ ಹೊಡೆದಾಟ ಆರಂಭವಾಗಿ ಊಟದ ಹಾಲ್ ರಣಾಂಗಣವಾಗಿ ಮಾರ್ಪಟ್ಟಿದೆ. ಮುಖ-ಮೂತಿ ನೋಡದೇ ಕುರ್ಚಿಯಿಂದ ಹೊಡೆದಾಡಿಕೊಂಡಿರುವ ಎರಡೂ ಕಡೆಯವರು ಊಟದ ಹಾಲನ್ನು ರಣಾಂಗಣ ಮಾಡಿಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES