Monday, December 23, 2024

ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ ನಿಧನ

ವಿಜಯಪುರ : ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ (64) ನಿಧನರಾಗಿದ್ದಾರೆ.

ವಿಲಾಸಬಾಬು ಆಲಮೇಲಕರ ಅವರು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ, ಮೂರು ಜನ ಪುತ್ರಿಯರನ್ನು ಅಗಲಿದ್ದಾರೆ. ಇವರು, ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ವಿಲಾಸಬಾಬು ನಿಧನಕ್ಕೆ ಸ್ಥಳೀಯ ಜನಪ್ರತಿಗಳು, ಗಣ್ಯರು, ಮಠಾಧೀಶರು‌ ಸಂತಾಪ ಸೂಚಿಸಿದ್ದಾರೆ.

ಕಿಡ್ನಿ ವೈಫಲ್ಯ, ಶುಗರ್, ಹೈಪರ್ ಟೆನ್ಷನ್

ಆಲಮೇಲಕರ ಅವರು ತೀವ್ರ ಅಸ್ವಸ್ಥರಾಗಿದ್ದು ಕೋಮಾ ಸ್ಥಿತಿಯಲ್ಲಿದ್ದರು. ಕಿಡ್ನಿ ವೈಫಲ್ಯ, ಶುಗರ್, ಹೈಪರ್ ಟೆನ್ಷನ್, ಬಹು ಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದರು. ಎರಡು ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು.

RELATED ARTICLES

Related Articles

TRENDING ARTICLES