Thursday, December 19, 2024

ಹುಡ್ಗೀರನ್ನ ನೋಡಲ್ಲ, ಆಂಟಿ ಪ್ರೊಫೈಲ್ ಕಂಡ್ರೆ ಬಿಡಲ್ಲ..!

ಬೆಂಗಳೂರು : ಇನ್ಸ್ಟಾಗ್ರಾಮ್​ನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಚೆಂದ ಕಾಣಿಸೋ ಆಂಟಿರನ್ನ ಟಾರ್ಗೆಟ್ ಮಾಡುತ್ತಿದ್ದ ಕದೀಮ.

ಅಸ್ಸಾಂ ಮೂಲದ ಫೈಸಲ್ ಆರೋಪಿ. ಎಂಬ ವ್ಯಕ್ತಿಯೊಬ್ಬ ಆಂಟೀರನ್ನ ಬೀಳಿಸೋಕೆ ಅಂತಾನೆ ಇನ್ಸ್ಟಾಗ್ರಾಮ್​ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದನು. ಅಷ್ಟೇ ಅಲ್ಲದೆ ಹುಡುಗಿಯರನ್ನು ಬಿಟ್ಟು ಪ್ರೊಫೈಲ್​ನಲ್ಲಿ ಸುಂದರವಾದ ಆಂಟಿಯರು ಕಂಡ್ರೆ ರಿಕ್ವೆಸ್ಟ್ ಕಳುಹಿಸಿ, ಅವರು ಅಕ್ಸೆಪ್ಟ್ ಮಾಡಿದ್ರೆ ಸಾಕು ಕಲರ್ ಕಲರ್ ಡೈಲಾಗ್ ಹೊಡೆದು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು.

ಇದನ್ನು ಓದಿ : ಘಟಪ್ರಭಾ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ

ಅಷ್ಟೇ ಅಲ್ಲದೆ ಹೆಣ್ಣುಮಕ್ಕಳ ಫ್ರೀಡಂ ಮತ್ತು ಅಂಕಲ್​ಗಳ ವೀಕ್ನೆಸ್ ಬಗ್ಗೆ ಮಾತಾಡುತ್ತ ತನಗೆ ಹತ್ರವಾಗುವಂತೆ ಮಾಡಿಕೊಳ್ಳುತ್ತಿದ್ದನು. ಬಳಿಕ ಬಲೆಗೆ ಬಿದ್ದ ಆಂಟಿಯರ ಬಳಿ ಖಾಸಗಿ ಜಾಗಗಳಿಗೆ ಕರೆದು ಲೈಗಿಂಕ ಸಂಪರ್ಕಕ್ಕೆ ಗಾಳ ಹಾಕುತ್ತಿದ್ದ ಕಿಲಾಡಿ.

ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದ ಖಾಸಗಿ ಕ್ಷಣಗಳನ್ನು ರೆಕಾರ್ಡ್​ ಮಾಡಿ, ಬಳಿಕ ಲಕ್ಷ ಲಕ್ಷ ಹಣ ಕೇಳಿ ಪೀಡಿಸುತ್ತಿದ್ದನು. ಇದರ ಬೆನ್ನಲ್ಲೇ ಓರ್ವ ಮಹಿಳೆಗೆ ಇದೇ ರೀತಿ ಹಣ ಕೊಡದಿದ್ರೆ ಗಂಡನಿಗೆ ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದ್ದನು. ಬಳಿಕ ಆ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಚೆನ್ನೈಗೆ ಕರೆದಿದ್ದ ಆರೋಪಿ.

ಈ ಬಗ್ಗೆ ಭಯಗೊಂಡ ಮಹಿಳೆ ಫೈಸಲ್ ವಿರುದ್ಧ ದೂರು ನೀಡಿದರು. ಬಳಿಕ ಮಾಹಿತಿ ಆಧರಿಸಿ ಚೆನ್ನೈನಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಇದೇ ರೀತಿ ಹಲವರಿಗೆ ವಂಚಿಸಿದ್ದು, ಸದ್ಯ ಆರೋಪಿ ಮೊಬೈಲ್​ನ್ನು ವಶಪಡೆದು ಪರಿಶೀಲನೆ ನಡೆಸಿರುವ ಪೋಲಿಸರು.

RELATED ARTICLES

Related Articles

TRENDING ARTICLES