Sunday, December 22, 2024

ದರ್ಶನ್​ ಮತ್ತು ನನ್ನ ನಡುವೆ ಜಗಳ ಅನ್ನೋದು ಕೇವಲ ಕಲ್ಪನೆ : ಸುದೀಪ್​

ಬೆಂಗಳೂರು : ಜಗಳ ಅನ್ನೋದೆಲ್ಲಾ ಕಲ್ಪನೆ, ಗೋಡೆ ಮುರಿಯಬೇಕು, ಆದ್ರೆ ಕಲ್ಪನೆ ಇರಬಾರದು, ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ಪಿಕೊಳ್ತೀನಿ ಎಂದು ನಟ ದರ್ಶನ್​ ಕುರಿತು ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಟ ಕಿಚ್ಚ ಸುದೀಪ್​ ಪ್ರತಿಕ್ರಿಯೆ ನೀಡಿದರು.

ಅಭಿಮಾನಿಗಳೊಂದಿಗೆ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು, ತುಂಬಾ ವರ್ಷಗಳ ಬಳಿಕ ಸುಮಲತಾ ಅವರ ಬರ್ತ್​ಡೇ ಗೆ ಹೋಗಿದ್ದೆ, ಅಲ್ಲಿ ದರ್ಶನ್​ ಇರ್ತಾರೆ ಅಂತ ಮುಂಚೆಯೆ ಗೊತ್ತಿತ್ತು, ಸುಮಲತಾ ಅವರು ನನ್ನನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಕಿಚ್ಚನ ಅದ್ದೂರಿ ಜನ್ಮದಿನ ಆಚರಣೆ

ನಾವಿಬ್ಬರು ಕಿತ್ತಾಡಿಕೊಂಡು ಜಗಳ ಆಡಿದ್ದೆವೆ ಎನ್ನುವುದೆಲ್ಲಾ ಕಲ್ಪನೆ, ಗೋಡೆ ಇರಬೇಕು ಆದರೇ ಕಲ್ಪನೆ  ಇರಬಾರದು, ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ಪಿಕೊಳ್ತೀನಿ, ಪ್ರಶ್ನೆಗಳು ಬರ್ತಾವೆ, ಅದರಲ್ಲಿ ಒಳ್ಳೇದು, ಕೆಟ್ಟದ್ದೂ ಇರ್ತಾವೆ, ಶೇಕ್ ಹ್ಯಾಂಡ್‌ ಮಾಡೋದು ದೊಡ್ಡ ವಿಚಾರವಲ್ಲ ಇಬ್ಬರೂ ಪ್ರಬುದ್ಧರಾಗಿದ್ದೀವಿ ಎಂದರು.

ಎಲ್ಲವೂ ಸರಿ ಹೋಗ್ಬೇಕು ಅಂದಾಗ ಸರಿ ಹೋಗುತ್ತೆ. ಆದರೇ, ಮನದಲ್ಲಿರೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಷ್ಟೇ. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ಪಿಕೊಳ್ತೀನಿ,‘ಅವರಲ್ಲಿ ಕೆಲ ಪ್ರಶ್ನೆ, ನನ್ನಲ್ಲಿ ಕೆಲ ಪ್ರಶ್ನೆಗಳಿರುತ್ತವೆ’ಅದಕ್ಕೆ ಉತ್ತರ ಸಿಗಬೇಕು ಎಂದು ಹೇಳಿದ ಸುದೀಪ್​, ಮಾತುಕತೆ ಮೂಲಕ ಮುನಿಸು ದೂರವಾಗಲಿದ್ಯಾ ಎನ್ನುವ ಸುಳಿವನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES