Wednesday, January 22, 2025

ವೈದ್ಯರ ನಿರ್ಲಕ್ಷ್ಯ ಬಾಲಕ ಸಾವು; ಕುಟುಂಬಸ್ಥರ ಪ್ರತಿಭಟನೆ

ಚಾಮರಾಜನಗರ : ವೈದ್ಯರ ನಿರ್ಲಕ್ಷದಿಂದ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಹಳೇ ಹಂಪಾಪುರ ಗ್ರಾಮದ ವಿಜಯ್ (10) ಮೃತ ದುರ್ದೈವಿ. ಅಪೆಂಡೆಕ್ಸ್ ಆಪರೇಷನ್​ಗಾಗಿ ಖಾಸಗಿ ಆಸ್ಪತ್ರೆಗೆ ಸೇರಿದ್ದ ಬಾಲಕ. ಬಳಿಕ ಆಪರೇಷನ್ ಸಮಯದಲ್ಲಿ ಬಾಲಕ ಮೃತಪಟ್ಟಿದ್ದಾನೆ. ಆದರೆ ವೈದ್ಯರು ಆಪರೇಷನ್ ಯಶಸ್ವಿಯಾಗಿದೆ ಎಂದು ಹೇಲಿದ್ದರು.

ಇದನ್ನು ಓದಿ : ಗಾಯಾಳು ವಿದ್ಯಾರ್ಥಿ ನೆರವಿಗೆ ಧಾವಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಈ ಘಟನಾ ಹಿನ್ನೆಲೆ ಶಸ್ತ್ರ ಚಿಕಿತ್ಸೆಗೆ ಮೊದಲು ಸರಿಯಾದ ಅರವಳಿಕೆ ಚುಚ್ಚುಮದ್ದು ಕೊಟ್ಟಿಲ್ಲವೆಂದು ಆರೋಪ ಮಾಡಿ, ಆಸ್ಪತ್ರೆ ಎದುರು ಮೃತ ಬಾಲಕನ ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದು, ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ ಹಾಗೂ ಎಸಿ ಮಹೇಶ್ ಭೇಟಿ ನೀಡಿದರು.

ಬಳಿಕ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸುವಂತೆ ಕುಟುಂಬಸ್ಥರು ಪಟ್ಟು ಹಿಡಿದು ಆಕ್ರೋಶವನ್ನು ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES