Wednesday, January 22, 2025

ದಸರಾಗೆ 30 ಕೋಟಿ ಕೊಡುವಂತೆ ಸಿಎಂಗೆ ಮನವಿ : ಸಚಿವ ಮಹದೇವಪ್ಪ

ಮೈಸೂರು : ದಸರಾಗೆ 30 ಕೋಟಿ ಅನುದಾನ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.

ಮೈಸೂರಿನ ವೀರನ ಹೊಸಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಾರಿ ಅದ್ದೂರಿ ದಸರಾ ಮಾಡಲು‌ ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

ಗಜಪಡೆಗಳನ್ನು ವಿದ್ಯುಕ್ತವಾಗಿ ಗಜಪಯಣ ಮೂಲಕ‌ ಸ್ವಾಗತ ಕೋರಲಾಗಿದೆ. ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಮೊದಲ‌ ಹಂತದಲ್ಲಿ 9 ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇನ್ನೂ‌ 5 ಆನೆಗಳು ತದ ನಂತರ ಅರಮನೆಗೆ ಬರುತ್ತವೆ. ಮಾವುತರು ಹಾಗೂ ಕಾವಾಡಿಗರಿಗೆ ಪ್ರೋತ್ಸಾಹ ನೀಡುತ್ತೇವೆ ಎಂದರು.

ಇದನ್ನೂ ಓದಿ : ಆತ್ಮೀಯ ರೈತಾಪಿ ಶಿಷ್ಯರಿಗೆ ತೇಜಿ ಮಂದಿ ಕಾಲಜ್ಞಾನ

ಅದ್ದೂರಿ ದಸರಾಗೆ ಸಿಎಂ ಸೂಚನೆ

ದೇಶ ವಿದೇಶಗಳಿಂದ ಲಕ್ಷಾಂತರ ಜನರು ದಸರಾ ಮಹೋತ್ಸಕ್ಕೆ ಬರುತ್ತಾರೆ. ಅದ್ದೂರಿ ದಸರಾ ಆಚರಣೆಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಧಾರ್ಮಿಕ ವಿಚಾರ, ರಾಜ್ಯಡಳಿತವನ್ನು ಸಂರಕ್ಷಣೆ ಮಾಡುವ ದೃಷ್ಟಿಯಿಂದ ಈ ಬಾರಿ ದಸರಾ ಆಚರಣೆ ಮಾಡುತ್ತೇವೆ ಎಂದು ಸಚಿವ ಮಹದೇವಪ್ಪ ಹೇಳಿದರು.

ಮೈಸೂರಿಗೆ ಆಗಮಿಸಿದ 9 ಆನೆಗಳು

ವಿಶ್ವವಿಖ್ಯಾತ ಮೈಸೂರು ದಸರಾಗೆ ಭರ್ಜರಿ ಸಿದ್ಧತೆ ನಡೆದಿದ್ದು, ಮೈಸೂರಿಗೆ ಆಗಮಿಸಿದ 9 ಆನೆಗಳಿಗೆ ಕಬ್ಬು, ಬೆಲ್ಲ ನೀಡಿ ಜಿಲ್ಲಾಡಳಿತ ಸ್ವಾಗತಿಸಿತು. ವೀರನಹೊಸಳ್ಳಿಯಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ಜೊತೆ 9 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿವೆ.

RELATED ARTICLES

Related Articles

TRENDING ARTICLES