ಬೆಂಗಳೂರು : ನಾನು ಚಾಲೆಂಜ್ ಮಾಡ್ತೀನಿ.. ಒಂದೇ ದಿನದ ಕೆಲಸ ಅಂತ ಹೇಳಿದ್ದಾರಲ್ವಾ? ಒಂದು ತಿಂಗಳು ಟೈಮ್ ಕೊಡ್ತೀನಿ. ನಮ್ಮ 45 ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಲಿ ನೋಡೋಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು.
40ರಿಂದ 45 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದರು.
ಬಿ.ಎಲ್ ಸಂತೋಷ್ಗೂ ಯಡಿಯೂರಪ್ಪಗೂ ಆಗಲ್ಲ ಅಂತ ಜನರೇ ಹೇಳ್ತಿದ್ದಾರೆ. ಕೇಶವಕೃಪಾದಿಂದ ಸಾಕಷ್ಟು ಬಿಜೆಪಿ ಶಾಸಕರು ಬೇಸತ್ತಿದ್ದಾರೆ. ಕೆಲವರು ಸುಮ್ಮನೆ ಕಾಟಾಚಾರಕ್ಕೆ ಸಭೆಗೆ ಹೋಗಿದ್ದಾರೆ. ಇಡಿ, ಐಟಿ, ಮೋದಿ, ಶಾ ಎಲ್ಲಾ ನಿಮ್ಮವರಲ್ವಾ? ಮಾಡಿ ನೋಡೋಣ ಎಂದು ಕುಟುಕಿದರು.
ಆಪರೇಶನ್ಗೆ ಎಲ್ಲಿಂದ ಹಣ ಬರ್ತಿದೆ?
ಆತ್ಮಾವಲೋಕನ ಸಭೆಗೆ ಬಹಳ ಲೇಟ್ ಆಗಿ ಬಂದಿದ್ದಾರೆ. ಪ್ರಾಂಬ್ಲಂ ಏನಂತೆ ಅವ್ರಿಗೆ? ಅವ್ರ ಸಂಪರ್ಕದಲ್ಲಿ ಯಾರೂ ಇಲ್ಲ. ಸುಮ್ಮನೆ ಆಸೆ ತೋರಿಸೋದು. ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದೀನಿ ಅಂತ ತೋರಿಸಿಕೊಳ್ಳೋದಷ್ಟೇ. ನಿಮ್ಮ ಎಂಎಲ್ಎಗಳು ನಿಮ್ಮನ್ನೇ ಬ್ಲೇಮ್ ಮಾಡ್ತಿರೋದು. ಆಪರೇಶನ್ ಕಮಲಕ್ಕೆ ಎಲ್ಲಿಂದ ಹಣ ಬರ್ತಿದೆ? Who is he? ಎಂದು ಪ್ರಶ್ನಿಸಿದರು.
ಅವರಿಂದಾನೇ ಬಿಜೆಪಿ ಹಾಳಾಗಿದ್ದು
ಒಂದೇ ಒಂದು ಗ್ರಾಮ ಪಂಚಾಯಿತಿ ಎಲೆಕ್ಷನ್ ಗೆದ್ದಿದ್ದಾರಾ ಅವರು? ಯಾಕೆ ಹೋಗಿ ಮಂಡಿಯೂರುತ್ತಾರೆ ಅವರ ಮುಂದೆ? ಬಿ.ಎಲ್ ಸಂತೋಷ್ ಅವರಿಂದಾನೇ ಬಿಜೆಪಿ ಪಕ್ಷ ಹಾಳಾಗಿದ್ದು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಬಹಳ ಕ್ಲಿಯರ್ ಆಗಿ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.