Sunday, December 22, 2024

ರಾಜ್ಯದ 33 ಸಚಿವರಿಗೆ 30 ಲಕ್ಷ ವೆಚ್ಚದ ಹೊಸ ಕಾರು: ಸರ್ಕಾರ ಆದೇಶ!

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟದ ಎಲ್ಲಾ 33 ಸಚಿವರಿಗೂ ಶೀಘ್ರದಲ್ಲೇ ಹೊಸ ಕಾರುಗಳು ದೊರೆಯಲಿದ್ದು 9.90 ಕೋಟಿ ರು ಅನುದಾನ ನೀಡಲಾಗಿದೆ.

ಸಂಪುಟದ ಎಲ್ಲಾ ಸಚಿವರಿಗೂ ತಲಾ 30 ಲಕ್ಷ ರು. ಬೆಲೆಯ 33 ಹೊಸ ಇನ್ನೋವಾ ಹೈಕ್ರಾಸ್ – ಹೈಬ್ರಿಡ್ ಕಾರುಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಿದ್ದು, ಇದಕ್ಕೆ 4ಜಿ ವಿನಾಯಿತಿ ನೀಡಿ 9.90 ಕೋಟಿ ರು.ಗಳ ಅನುದಾನ ನೀಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಾರದ ಹಿಂದೆಯೇ ನಿರ್ಧಾರವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ: ವೀರೇಂದ್ರ ಹೆಗ್ಗಡೆ ವಿರುದ್ಧ ಹೇಳಿಕೆಗೆ ತಡೆ ಆದೇಶ ಪಾಲಿಸಿ: ಹೈಕೋರ್ಟ್​

ನೂತನ 33 ಸಚಿವರುಗಳಿಗೆ ಹೊಸ ಇನ್ನೋವಾ ಹೈಕ್ರಾಸ್ – ಹೈಬ್ರಿಡ್ ವಾಹಗಳನ್ನು ಪ್ರತಿ ವಾಹನಕ್ಕೆ ಜಿಎಸ್ಟಿ ಸೇರಿದಂತೆ ಎಕ್ಸ್‌ ಶೋರೂಂ ಬೆಲೆ 30 ಲಕ್ಷ ರು.ನಂತೆ ಒಟ್ಟು 9.90 ಕೋಟಿ ರು. ವೆಚ್ಚದಲ್ಲಿ ಟೊಯೋಟೋ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಇವರಿಂದ ನೇರವಾಗಿ ಖರೀದಿಸಲು ಆದೇಶಿಸಿದೆ.

RELATED ARTICLES

Related Articles

TRENDING ARTICLES