Wednesday, January 22, 2025

ದೇವಿಯ ದರ್ಶನಕ್ಕೆ ತೆರಳಿದ್ದ ಭಕ್ತರ ಟ್ರ್ಯಾಕ್ಟರ್ ಪಲ್ಟಿ ; ವ್ಯಕ್ತಿ ಸಾವು

ಚಿಕ್ಕೋಡಿ : ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಸೇತುವೆ ಬಳಿ ನಡೆದಿದೆ.

ಕಕಮರಿ ಗ್ರಾಮದ ಜನರು ಚಿಂಚಲಿ ಮಾಯಕ್ಕ ಎಂಬ ದೇವಿ ದರ್ಶನಕ್ಕೆ ಟ್ರ್ಯಾಕ್ಟರ್ ಒಂದರಲ್ಲಿ ತೆರಳಿದ್ದರು. ಈ ವೇಳೆ ದರೂರ ಸೇತುವೆಯ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಅಕ್ಷತಾ ಕನಮಡಿ (20) ಮೃತ ದುರ್ದೈವಿ. ಎಂಬಾತ ಮೃತಪಟ್ಟಿದ್ದಾರೆ.

ಇದನ್ನು ಓದಿ : ಮೋದಿ, ನಡ್ಡಾ, ಶಾ ವಿರುದ್ಧ ನಾನು ಮಾತಾಡಿಲ್ಲ : ರೇಣುಕಾಚಾರ್ಯ

20 ಕ್ಕೂ ಹೆಚ್ಚು ಅಧಿಕ ಭಕ್ತರಿದ್ದ ಡಬ್ಬಲ್ ಟ್ರಾಲಿ ಹೊಂದಿದ್ದು,ಪಲ್ಟಿ ಹೊಡೆದ ಹಿನ್ನೆಲೆ ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಸ್ಠಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನಾ ಸಂಬಂಧ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

RELATED ARTICLES

Related Articles

TRENDING ARTICLES