Sunday, January 19, 2025

ತಂದೆ ಅಧಿಕಾರದಿಂದ ಕೆಳಗಿಳಿದಾಗ ನೊಂದುಕೊಂಡಿದ್ದರು : ವಿಜಯೇಂದ್ರ

ಬೆಂಗಳೂರು : ಇಂದಿನಿಂದ ಅಧಿಕೃತವಾಗಿ ಶಿವಮೊಗ್ಗ ಏರ್ಪೋಟ್​ನಿಂದ ವಿಮಾನಯಾನ ಆರಂಭವಾಗುತ್ತಿರುವ ಕುರಿತು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಂದೆ ಮೊದಲ ಬಾರಿ 2011ರಲ್ಲಿ ಅಧಿಕಾರದಿಂದ ಕೆಳಗಿಳಿದಾಗ ನೊಂದುಕೊಂಡಿದ್ದರು. ಮತ್ತೆ ಮುಖ್ಯಮಂತ್ರಿ ಆದಾಗ ರಾಘವೇಂದ್ರ ಅಣ್ಣ ಅಧಿಕಾರಿಗಳ ಬೆನ್ನು ಬಿದ್ರು ಎಂದು ಹೇಳಿದ್ದಾರೆ.

ಹೆಮ್ಮೆಯ ಮಲೆನಾಡಿನ ಶಿವಮೊಗ್ಗ ವಿಮಾನ ನಿಲ್ದಾಣ. ದೇಶದ ಪ್ರಧಾನಿ ಮೋದಿಯವರು ಡಾ.ಬಿ.ಎಸ್ ಯಡಿಯೂರಪ್ಪ ಜನ್ಮದಿನದಂದು ಲೋಕಾರ್ಪಣೆ ಮಾಡಿದ್ರು. ಇಂದಿನಿಂದ ಅಧಿಕೃತವಾಗಿ ವಿಮಾನಯಾನ ಆರಂಭವಾಗಲಿದೆ. ತಂದೆ ಯಡಿಯೂರಪ್ಪ ಹಾಗೂ ರಾಘಣ್ಣ ಪ್ರಯಾಣ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಾಣಿಜ್ಯ, ಪ್ರವಾಸೋದ್ಯಮಕ್ಕೆ ಅನುಕೂಲ

ಶಿವಮೊಗ್ಗ ಜಿಲ್ಲೆಯ ಜನರ ನಿರೀಕ್ಷೆ ಇತ್ತು. ವಿಮಾನಯಾನದಿಂದ ಬಹಳ ಜನರಿಗೆ ಅನುಕೂಲ ಆಗಲಿದೆ. ವಾಣಿಜ್ಯ, ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ. ಮೊದಲ ವಿಮಾನ ಪ್ರಯಾಣ ಇಂದು ಅನುಕೂಲ ಆಗಲಿದೆ ಎಂದು ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES