ಚಿಕ್ಕಮಗಳೂರು : ಬರಕ್ಕೆ ಚಿಕ್ಕಮಗಳೂರಿನಲ್ಲಿ ಈ ವರ್ಷ ಮೊದಲ ರೈತನ ಬಲಿಯಾಗಿದೆ. ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸತೀಶ್ (48) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದುಬಂದಿದೆ.
ಮಳೆ ನಂಬಿ ರೈತ ಸತೀಶ್ ಈರುಳ್ಳಿ ಬೆಳೆದಿದ್ದರು. ಮಳೆ ಕೈಕೊಟ್ಟ ಹಿನ್ನೆಲೆ ಈರುಳ್ಳಿ ಬೆಳೆ ನಾಶವಾಗಿದೆ. ಮೃತ ರೈತ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ವಿವಿಧ ಕಡೆ ಸಾಲ ಮಾಡಿದ್ದರು. ಬಿತ್ತನೆ ಬೀಜ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಸಾಲ ಮಾಡಿದ್ದರು.
ವರುಣ ಕೈಕೊಟ್ಟ ಕಾರಣ ಈರುಳ್ಳಿ ಬೆಳೆ ಒಣಗಿತ್ತು. ಇದರಿಂದ ರೈತ ಸತೀಶ್ ಸಂಕಷ್ಟಕ್ಕೀಡಾಗಿದ್ದರು. ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಇನ್ನೂ ಸಾಲಕ್ಕೆ ಹೆದರಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.