ದೊಡ್ಡಬಳ್ಳಾಪುರ : ಮಳೆಗಾಗಿ ಕತ್ತೆ ಮದುವೆ ನೋಡಿದ್ದೇವೆ. ಕಪ್ಪೆಗಳ ಮದುವೆನೂ ನೋಡಿದ್ದೇವೆ. ಆದ್ರೆ, ಗಂಡಿಗೆ ಹೆಣ್ಣಿನ ವೇಷ ಹಾಕಿ ಮದುವೆ ಮಾಡಿರೋದನ್ನು ನೋಡಿದ್ದೀರಾ?
ಹೌದು, ವರುಣನ ಆಗಮನಕ್ಕಾಗಿ ಗ್ರಾಮಸ್ಥರು ಪುಟ್ಟ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿರುವ ಪ್ರಸಂಗ ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ. ಹೀಗಾಗಿ, ಜನರೆಲ್ಲಾ ಸೇರಿ ವಿಭಿನ್ನ ರೀತಿಯಲ್ಲಿ ಮದುವೆ ಮಾಡಿಸಿದ್ದಾರೆ.
ಒಬ್ಬ ಹುಡುಗನಿಗೆ ಹುಡುಗಿ ವೇಷ ಹಾಕಿ ನವ ದಂಪತಿಗಳಂತೆ ಮದುವೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ವಧು-ವರರಿಗೆ ಯಾವ ರೀತಿ ಮದುವೆ ಮಾಡಲಾಗುತ್ತದೆಯೋ ಅದೇ ರೀತಿ ಶಾಸ್ತ್ರೋಕ್ತವಾಗಿ ಗ್ರಾಮಸ್ಥರು ಅದ್ದೂರಿಯಾಗಿ ವಿವಾಹ ಮಾಡಿಸಿದ್ದಾರೆ. ಪುಟ್ಟ ವರ ವಧುವಿಗೆ ತಾಳಿ ಕಟ್ಟಿದ್ದಾನೆ. ನವ ದಂಪತಿಗಳಿಬ್ಬರೂ ಸಪ್ತಪದಿಯನ್ನೂ ತುಳಿದಿದ್ದಾರೆ. ಮದುವೆ ಬಳಿಕ, ಊಟದ ವ್ಯವಸ್ಥೆ ಮಾಡಲಾಗಿತ್ತು.