Sunday, December 22, 2024

ಜೊತೆಯಾಗಿ ಸಾಯಲು ಬಂದ ಜೋಡಿ: ಯುವಕ ಹೊಂಡಕ್ಕೆ ಹಾರುತ್ತಿದ್ದಂತೆ ಯುವತಿ ಎಸ್ಕೇಪ್​

ವಿಜಯಪುರ :  ಯುವತಿಯೊಂದಿಗೆ ಬಂದ ಯುವಕನೋರ್ವ ಹೊಂಡದಲ್ಲಿ ಬಿದ್ದು ಸಾವಿಗೆ ಶರಣಾಗಿರುವ ಶಂಕೆ ವಿಜಯಪುರ ನಗರದ ಗಗನ್ ಮಹಲ್ ಹಾಗೂ ಜಿಲ್ಲಾಧಿಕಾರಿಗಳ ನಿವಾಸದ ಬಳಿ ಇರುವ ಪುರಾತನ ಹೊಂಡದಲ್ಲಿ ನಡೆದಿದೆ.

25 ವರ್ಷ ವಯಸ್ಸಿನ ಯುವಕ ಸಾವಿಗೆ ಶರಣಾಗಿದ್ದು ಆತನ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ ಎನ್ನಲಾಗಿದೆ. ಇಂದು ಬೆಳಿಗ್ಗೆ ಯುವತಿಯೊಂದಿಗೆ ಹೊಂಡದ ಬಳಿ ಆಗಮಿಸಿದ್ದ ಯುವಕ ಮತ್ತು ಯುವತಿ ಸಾಯಲು ಮುಂದಾಗಿದ್ದಾರೆ. ಸಾಯುವ ಮುನ್ನ ಇಬ್ಬರು ಒಟ್ಟಿಗೆ ಹಾರಲು ತೀರ್ಮಾನಿಸಿ ಯುವಕ ಹಾಕಿದ್ದ ತನ್ನ ಶರ್ಟ್ ತೆಗೆದು ಇಬ್ಬರ ಕೈಗೆ ಕಟ್ಟೊಕೊಂಡಿದ್ದಾರೆ.

ಇದನ್ನೂ ಓದಿ: ಲಾರಿ ಚಾಲಕನ ಅಜಾಗರುಕತೆ: ವೃದ್ದೆ ಸಾವು!

ಮೊದಲಿಗೆ ಯುವಕ ಹೊಂಡದಲ್ಲಿ ಹಾರಿದ್ದಾನೆ. ಬಳಿಕ, ಯುವತಿ ಮನಸ್ಸು ಬದಲಿಸಿಕೊಂಡು ಯುವಕ ಹೊಂಡದಲ್ಲಿ ಹಾರುತ್ತಿದ್ದಂತೆ  ಕೈಗೆ ಕಟ್ಟಿದ್ದ ಗಂಟನ್ನು ಬಿಚ್ಚಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಗಂಟೆಗಳ ಶೋಧ ಕಾರ್ಯ ನಡೆಸಿ ಯುವಕನ ಶವ ಪತ್ತೆಹಚ್ಚಿದ್ದಾರೆ. ಶವವನ್ನು ಅಗ್ನಿಶಾಮಕ ಸಿಬ್ಬಂದಿ ಗೋಲಗುಮ್ಮಟ ಪೊಲೀಸರ ವಶಕ್ಕೆ ಒಪ್ಪಿಸಿದ್ದು ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES