ಬೆಂಗಳೂರು: ಅಣ್ಣ-ತಂಗಿ, ಸಹೋದರ-ಸಹೋದರಿ ಭ್ರಾತೃತ್ವದ ಸಂಕೇತವಾದ ರಕ್ಷಾ ಬಂಧನ ದಿನವನ್ನು ದೇಶಾದ್ಯಂತ ಇಂದು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಸಹೋದರಿಯರಿಗೆ ಸಹೋದರರು ನೀಡುವ ರಕ್ಷಣೆಯನ್ನು ಪ್ರತಿಬಿಂಬಿಸುವ ಆಚರಣೆ ಇದಾಗಿದೆ. ಸಹೋದರರಿಗೆ ತಮ್ಮ ಸಹೋದರಿಯರು ರಾಖಿ ಕಟ್ಟುವ ಮೂಲಕ ನಿಮ್ಮ ರಕ್ಷಣೆ ಸದಾ ನಮ್ಮ ಮೇಲಿರಲಿ ಎಂದು ಕೋರಿಕೊಳ್ಳುವ ಹಬ್ಬವಾಗಿದೆ. ಇದಕ್ಕೆ ಪ್ರತಿಯಾಗಿ ಸಹೋದರರು ಸಹೋದರಿಗೆ ರಾಖಿ ಕಟ್ಟಿದ್ದಕ್ಕೆ ತಮ್ಮಿಷ್ಟದ ಉಡುಗೊರೆ ಕೊಡುವುದು ಸಂಪ್ರದಾಯವಾಗಿದೆ.
ರಾಖಿ ಹಬ್ಬದ ಪ್ರಯುಕ್ತ ರಾಖಿಗಳಿಗೆ ಬೇಡಿಕೆ ಹೆಚ್ಚಾಗಿದ್ದು,ಅಂಗಡಿ, ಮಳಿಗೆಗಳಲ್ಲೂ ರಾಖಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಗೆ ತರಹೇವಾರಿ ರಾಖಿಗಳು ಬಂದಿದ್ದು, 10 ರೂಪಾಯಿಯಿಂದ ಸಾವಿರ ರೂ.ಗಳವರೆಗೂ ರಾಖಿಗಳು ಬಂದಿವೆ.
ಹಬ್ಬ ಇಂದಾ? ನಾಳೆನಾ?
ರಕ್ಷಾ ಬಂಧನ ಆಚರಣೆಯಲ್ಲಿ ಗೊಂದಲವಿದೆ. ಪಂಚಾಗದ ಪ್ರಕಾರ ಇಂದು ಅಶುಭ ದಿನ. ಇದನ್ನು ಭದ್ರಕಾಲ ಎನ್ನಲಾಗುತ್ತದೆ. ಹೀಗಾಗಿ, ಇಂದು ರಾಖಿ ಕಟ್ಟಿದರೆ ಸಹೋದರರಿಗೆ ಕಟ್ಟದಾಗುತ್ತದೆ ಎಂಬ ನಂಬಿಕೆ. ಭದ್ರಕಾಲ ಇಂದು ರಾತ್ರಿ 9.01ಕ್ಕೆ ಮುಕ್ತಾಯವಾಗಲಿದೆ. ಬಳಿಕವೇ ರಾಖಿ ಹಬ್ಬ ಆಚರಿಸುವುದು ಒಳಿತು.