ಬೆಂಗಳೂರು : ಇಂದು ಕರಾವಳಿ ಭಾಗದಲ್ಲಿ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೊಂಚ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ನಗರಗಳಲ್ಲಿ ಮೋಡ ಮುಸುಕಿದ ವಾತಾವರಣ, ಕೆಲವು ಕಡೆ ಬಿಸಿಲು ಇರಲಿದೆ. ಸೆಖೆ ಅಂತೂ ಬಹುತೇಕ ಎಲ್ಲಾ ನಗರಗಳಲ್ಲಿಯೂ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮಳೆಯ ವಿಚಾರಕ್ಕೆ ಬರುವುದಾದರೆ, ಕರಾವಳಿ ಭಾಗದಲ್ಲಿ ಮಾತ್ರ ಕೊಂಚ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಉತ್ತರ ಕರ್ನಾಟಕದಲ್ಲಿ ಕಲಬುರಗಿಯ ಕೆಲವು ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ದಕ್ಷಿಣದಲ್ಲಿ ಬೆಂಗಳೂರು ಗ್ರಾಮಾಂತರದ ಸುತ್ತಮುತ್ತಲಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಬಿಸಿಲು
ಬೆಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ, ಬಿಸಿಲಿನ ಪ್ರಖರತೆಯು ಹೆಚ್ಚಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ. ಬಿಸಿಲು, ಮೋಡ ಮುಸುಕಿದ ವಾತಾವರಣ, ಹೀಗೆ ಏನೇ ಸಂದರ್ಭಗಳಿರಲಿ.. ಸೆಖೆಯ ಎಫೆಕ್ಟ್ ಇದ್ದೇ ಇರುತ್ತದೆ.