Wednesday, January 22, 2025

ಬೆಲೆ ಏರಿಕೆ ಏಟು ಬೆನ್ನ ಮೇಲೆ ಬರೆ ಎಳೆದಿದೆ : ರಾಹುಲ್ ಗುಡುಗು

ಮೈಸೂರು : ಬೆಲೆ ಏರಿಕೆಯ ಏಟು ದೇಶದ ಪ್ರತಿಯೊಬ್ಬರ ಬೆನ್ನ ಮೇಲೆ ಬರೆ ಎಳೆದಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಗುಡುಗಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಏಟು ಬಿದ್ದಿದೆ. ಈ ಬೆಲೆ ಏರಿಕೆಯ ಹೊರೆ ಹೊರಲು ಸಾಧ್ಯವಿಲ್ಲ ಅಂತ ಸಾವಿರರಾರು ಸಂಖ್ಯೆಯ ಹೆಣ್ಣುಮಕ್ಕಳು ಅಳಲು ತೋಡಿಕೊಂಡಿದ್ದಾರೆ. ನಾವು ನಿಮಗೆ ಐದು ಭರವಸೆ ಕೊಟ್ಟಿದ್ದೆವು. ನೀವು ನಮ್ಮ ಐದು ಯೋಜನೆಗಳನ್ನು ಗಮನಿಸಿ. ಯುವನಿಧಿ ಯೋಜನೆ ಒಂದು ಬಿಟ್ಟು ಉಳಿದ 4 ಯೋಜನೆ ಮಹಿಳೆಯರಿಗಾಗಿ ಮಾಡಿದ ಯೋಜನೆಗಳು ಎಂದರು.

ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಇವತ್ತು ನಾವು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಜಮಾ ಮಾಡಿದ್ದೇವೆ. ಪ್ರತಿ ತಿಂಗಳು 2 ಸಾವಿರ ಹಣ ಜಮಾ ಆಗಲಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES